ಕ್ರಿಶ್ಚಿಯನ್ ಸಮುದಾಯದ ಆಸ್ತಿ ಅಕ್ರಮ ಮಾರಾಟ ಆರೋಪ
ಕಲಬುರಗಿ : ಜು.31:ನಕಲಿ ದಾಖಲೆ ಸೃಷ್ಟಿಸಿ ಕ್ರಿಶ್ಚಿಯನ್ ಸಮುದಾಯದ ನಗರದಲ್ಲಿರುವ ಶಾಂತಿ ಸದನ ಆಸ್ತಿ ಮಾರಾಟ ಮಾಡುವ ನೆಪದಲ್ಲಿ ಅಮಾಯಕರ ಮೋಸದ ಜಾಲದಲ್ಲಿ ಸಿಲುಕಿಸಿ ಅವರಿಂದ ಕೋಟ್ಯಾಂತರ ರೂಪಾಯಿ ಪಡೆದಿರುವ ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಲಬುರಗಿ ಮೆಥೋಡಿಸ್ಟ್ ಚರ್ಚ್ ಹಿತೈಸಿಗಳು ಹಾಗೂ ಶಾಂತಿ ಸದನ ಹೋರಾಟ ಸಮಿತಿ ವತಿಯಿಂದ ನಗರದ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಆರೋಪಿಗಳ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಹ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮವಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂದ್ಯರಾಜ್ ಶಾಮುಲ್, ಮನಮೋಹನ, ಜಯಪ್ರಭು ಸಮುದ್, ವಿನೋದಕುಮಾರ, ಸುಧೀರ ಎಸ್.ಕೆ ಸೇ ರಿದಂತೆ ಇತರರಿದ್ದರು.