ಶುದ್ಧ ನೀರು ವಿದ್ಯುತ್ ತಂತಿ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಸೇಡಂ, ಜು,31: ತಾಲೂಕಿನ ಮಳಖೇಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೂಡಾ.ಕೆ (ರಾಜೀವ ನಗರ) ದಲ್ಲಿ ಸುಮಾರು ವರ್ಷಗಳಿಂದೆ ಶುದ್ಧ ನೀರಿನ ಘಟಕ ವಿದ್ದರು ಶುದ್ಧ ಕುಡಿಯುವ ನೀರು ಕುಡಿಯು ಭಾಗ್ಯ ವಿಲ್ಲದೆ ಬೋರ್ವೆಲ್, ಹಳ್ಳದ ಹಾಗೂ ಮಳಖೇಡ ಸೇಡಂ ಗಳಿಂದ ಶುದ್ಧ ನೀರು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಆದ್ದರಿಂದ ಇದ್ದ ಶುದ್ಧ ನೀರಿನ ಘಟಕ ಆರಂಭಕ್ಕೆ ಮೊದಲು ಆದ್ಯತೆ ನೀಡಬೇಕು, ಹಾಗೂ ಗ್ರಾಮದ ಕೆಲವು ರಸ್ತೆ ಬದಿಯಲ್ಲಿ ವಿದ್ಯುತ್ ತಂತಿ ಸಡಿಲವಾಗಿರುವುದರಿಂದ ಸ್ಪರ್ಶವಾಗಿ ವಿದ್ಯುತ್ ಬರಲಾರಂಬಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡುವಂತಾಗಿದೆ ವಿದ್ಯುತ್ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ದುರಸ್ತಿ ಮಾಡಬೇಕು, ಮತ್ತು ಹಳೆ ಬಾವಿ ಇದ್ದು ಇದಕ್ಕೆ ಯಾವುದೇ ರೀತಿಯ ಕಾಂಪೌAಡ್ ಇಲ್ಲದೆ ಹಾಗೂ ಮೇಲೆ ಕಬ್ಬಿಣದ ಜಾಲಿ ಇಲ್ಲದೆ ಗ್ರಾಮಸ್ಥರಿಗೆ ತೊಂದರೆ ಅನುಭವಿಸುತ್ತಿದ್ದಾರೆ, ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಸಂಜೆವಾಣಿ ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ.