ಅದ್ದೂರಿಯಾಗಿ ಜರುಗಿದ ಮರೆಮ್ಮದೇವಿ ಜಾತ್ರೆ
ಜೇವರ್ಗಿ: ಜು.31:ತಾಲೂಕಿನ ಅಂದೋಲಾ ಗ್ರಾಮದ ಆರಾಧ್ಯ ದೇವತೆ ಮರೆಮ್ಮ ದೇವಿ ಜಾತ್ರೆಯು,ಬಹು ಅದ್ದೂರಿಯಿಂದ ಜರುಗಿತು ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಭಾಗರೆಡ್ಡಿ ವಾಯ್ ಹೊತಿನಮಡು ತಿಳಿಸಿದ್ದಾರೆ.
ಸೋಮವಾರದಿಂದ ಬುಧವಾರದ ವರೆಗೆ,ಎರಡ್ಮೂರು ದಿನಗಳ ಕಾಲ ಬಹು ಅದ್ದೂರಿಯಾಗಿ ನಡೆಯಿತು.ಬಣಗಾರ ಮನೆಯಿಂದ ಮಲ್ಲಾ ಬಿ,ಗ್ರಾಮಕ್ಕೆ ಗಂಗಸ್ಥಳಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಾಗಿತು.ನಂತರ ಮಲ್ಲಾ ಗ್ರಾಮದಲ್ಲಿ ನೈವೇದ್ಯ ಹಾಗೂ ಜಂಗಿ ಕುಸ್ತಿ ನಡೆಯಿತು ಎಂದು ಹೋತಿನಮಡು ಹೇಳಿದ್ದಾರೆ.
ನಂತರ ರಾತ್ರಿ 12:30ರ ಮರೆಮ್ಮ ದೇವಿಯು ಅಂದೋಲಾ ಗ್ರಾಮಕ್ಕೆ ಬಾಜಾ ಬಜಂತ್ರಿಗಳೋAದಿಗೆ ತಾಯಿಯನ್ನು ಬರಮಾಡಿಕೊಳ್ಳಲಾಯಿತು.
ಮಂಗಳವಾರ ಬೆಳಗ್ಗೆ, ಅಂದೋಲಾ ಗ್ರಾಮಸ್ಥರಿಂದ ನೈವೇದ್ಯ ಕಾರ್ಯಕ್ರಮ ಜರುಗಿತು. ಸಾಯಂಕಾಲ 4 ಗಂಟೆಗೆ ದೇವಿಯ ಭವ್ಯ ಮೆರವಣಿಗೆಯನ್ನು, ಗ್ರಾಮದ ಪ್ರಮುಖ ಬಿದಿಗಳಲ್ಲಿ ಬಹು ಅದ್ದೂರಿಯಾಗಿ ನಡೆಯಿತು. . ಈ ಮೆರವಣಿಗೆ ಕಾರ್ಯಕ್ರಮದಲ್ಲಿ, ರಾಜಕೀಯ ಗಣ್ಯಾತಿ ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ದೇವಿಯ ದರ್ಶನ ಪಡೆದರು.
ಬುಧವಾರ ಬೆಳಗ್ಗೆ ಮಹಾ ಪ್ರಸಾರ ನಡೆಯಿತು ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಭಾಗರೆಡ್ಡಿ ವಾಯ್, ಹೋತಿನಮಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.