ಮಿಸೈಲ್ ಮ್ಯಾನ್ ಎಂದು ಪ್ರಖ್ಯಾತಿ ಹೊಂದಿದ್ದ ಕಲಾಂ : ಈಶ್ವರಸಿಂಗ್ ಠಾಕೂರ್
ಬೀದರ:ಜು.31: ಭಾರತೀಯ ಜನತಾ ಪಾರ್ಟಿಯ ಬೀದರ ಜಿಲ್ಲೆಯ ಅಲ್ಪಸಂಖ್ಯಾತರ ಮೊರ್ಚಾ ವತಿಯಿಂದ ಮಾಜಿ ರಾಷ್ಟçಪತಿಗಳಾದ ಡಾ|| ಎ.ಪಿ.ಜೆ. ಅಬ್ದುಲ ಕಲಾಂ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ಜನತಾ ಪಕ್ಷದ ವಿಭಾಗೀಯ ಪ್ರಭಾರಿಗಳು ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ ಠಾಕುರ ಮಾತಾಡುತ್ತ ಮಾಜಿ ರಾಷ್ಟçಪತಿ ಎ.ಪಿ.ಜೆ. ಅಬ್ದುಲ ಕಲಾಂರವರು ಭಾರತದ ಇತಿಹಾಸದ ಪುಟದಲ್ಲಿ ಮುಸ್ಲಿಂ ವ್ಯಕ್ತಿಯಾಗದೆ ರಾಷ್ಟಿçಯವಾದಿ ವ್ಯಕ್ತಿಯಾಗಿ ಹೊರಹೊಮ್ಮಿದರು. ಅವರು ಮಾಜಿ ಪ್ರಧಾನಮಂತ್ರಿ ಅಟಲಜೀ ಅವರ ಜೊತೆಗೂಡಿ ಪೊಖ್ರಾನ ಸ್ಪೊಟ ಮಾಡಿಸಿ, ಇಡೀ ಜಗತ್ತೇ ಆಶ್ಚರ್ಯಪಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೀಗಾಗಿಯೇ ಇವರು ಭಾರತೀಯ ಇತಿಹಾಸದಲ್ಲಿ ಮಿಸೈಲ್ ಮ್ಯಾನ ಎಂದು ಕರೆಸಿಕೊಂಡಿದ್ದರು. ಕಲಾಂ ಒಬ್ಬ ವ್ಯಕ್ತಿಯಲ್ಲ ಬದಲಾಗಿ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷರಾದ ಶಫಿಯುದ್ದಿನ್, ರಾಜ್ಯ ಪ್ರಧಾನ ಕಾರ್ಯದರ್ಶಿ ರೌಫೋದ್ದಿನ್ ಕಚೇರಿವಾಲೆ, ಬಿಜೆಪಿ ಮುಖಂಡರಾದ ಗುರುನಾಥ ಜ್ಯಾಂತಿಕರ್, ರಾಜಶೇಖರ ನಾಗಮೂರ್ತಿ, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಇಲಿಯಾಸ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಲಾಠೋಡಿ, ಸುಲೇಮಾನ್, ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ರಾಜಕುಮಾರ ಪಾಟೀಲ ನೆಮತಾಬಾದ, ಕಾರ್ಯಾಲಯ ಕಾರ್ಯದರ್ಶಿ ಸುಭಾಷ, ಮುದಸರ್ ಹುಸೇನ್, ಆದಿಲ್, ಗೋಪಾಲ ಕುಕಡ, ಸುಧಾಕರ್ ಪಾಂಚಾಳ, ರವಿ ಜ್ಞಾನಪ್ಪನವರ್ ಸೇರಿದಂತೆ ಪಕ್ಷದ ಮೈನಾರಿಟಿ ಮೋರ್ಚಾದ ವಿವಿಧ ಪದಾಧಿಕಾರಿಗಳು ಹಾಜರಿದ್ದರು. ಮಾಜಿ ರಾಷ್ಟçಪತಿಗಳಾದ ದಿ. ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಲಾಯಿತು.