ಹಾವು ಕಚ್ಚಿ : ರೈತ ಸಾವು.
ಕೂಡ್ಲಿಗಿ. ಜು 31 :- ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಗೆ ನೀರು ಹಾಯಿಸಲು ಹೋದ ರೈತನೋರ್ವನಿಗೆ ಹಾವೊಂದು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ ತಾಲೂಕಿನ ಗುಂಡುಮುಣುಗು ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಗುಂಡುಮುಣುಗು  ಗಂಗಪ್ಪ(47) ಎಂಬ ರೈತನೇ ಹಾವು ಕಚ್ಚಿದ ಪರಿಣಾಮ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತನು ತನ್ನ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಗೆ ನೀರು ಹಾಯಿಸಲು ಹೋದಾಗ ಅಲ್ಲೇ ಇದ್ದ ಹಾವೊಂದು ಕಚ್ಚಿದ ಪರಿಣಾಮ ತಕ್ಷಣ ಆತನನ್ನು ತಾಲೂಕಿನ ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆಂದು ಮೃತನ ಹೆಂಡತಿ ರೇಕಮ್ಮ ನೀಡಿದ ದೂರಿನಂತೆ  ಕಾನಾ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.