ಹಬೋಹಳ್ಳಿ : ಪತ್ರಿಕಾ ದಿನಾಚರಣೆ ತಾಲೂಕಿನ 19 ಆಂಬ್ಯುಲೆನ್ಸ್ ಚಾಲಕರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.31 ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ 19 ಆಂಬುಲೆನ್ಸ್ ಚಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
 ಸನ್ಮಾನ ಸ್ವೀಕರಿಸಿದ ಆಂಬುಲೆನ್ಸ್ ಚಾಲಕ ನಜೀರ್ ಪತ್ರಿಕೆಯೊಂದಿಗೆ ಮಾತನಾಡಿ ಪತ್ರಕರ್ತರ ಸಂಘದಿಂದ ನಮ್ಮ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದ್ದಾರೆ. ನಮ್ಮ ಕಾಯಕಕ್ಕೆ ಗೌರವಿಸಿದ ಸಂಘದ ಪದಾಧಿಕಾರಿಗಳು  ಎಲ್ಲಾ ಸದಸ್ಯರಿಗೆ ಧನ್ಯವಾದಗಳು. ಈ ಸನ್ಮಾನದಿಂದ ನಮ್ಮಗೆ ಸಂತೋಷದ ಜೊತೆ . ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ರೋಗಿಗಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಹೆಚ್ಚಿದೆ ಎಂದರು.
 ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಉಮಾಪತಿ ಶೆಟ್ಟರ್, ಜಿಲ್ಲಾ ಉಪಾಧ್ಯಕ್ಷ ಬುಡ್ಡಿ ಬಸವರಾಜ್, ಕಾರ್ಯದರ್ಶಿ ಭೀಮ್ ರಾಜ್, ಖಜಾಂಚಿ ರಾಜಾವಲಿ ಗಡದ್, ಸಹ ಕಾರ್ಯದರ್ಶಿ ಅಕಂಡಿ ಬಸವರಾಜ್ , ಸದಸ್ಯರಾದ ಸಿ. ಶಿವಾನಂದ್, ಜೆ.ನಾಗರಾಜ್, ಮಂಜುನಾಥ್ ಪಟ್ಟಣಶೆಟ್ಟಿ, ವಿಶ್ವನಾಥ್ ಬಾವಿಕಟ್ಟಿ, ಅಶೋಕ್ ಉಪ್ಪಾರ್, ವೀರೇಶ್ ಮಜ್ಜಿಗಿ, ಬಿ ಕೆ ಬಸವರಾಜ್ ಇದ್ದರು.