ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,31- ಪ್ಲೇಸ್‌ಮೆಂಟ್ ಸೆಲ್, ವೀರಶೈವ ಮಹಾವಿದ್ಯಾಲಯ, ಬಳ್ಳಾರಿ ಮತ್ತು ಗುರುದೇವ್ ಅಕಾಡೆಮಿ, ದಾರವಾಡ ಇವರ ಸಹಯೋಗದೊಂದಿಗೆ ನಿನ್ನೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾಯಕ್ರಮದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ  ಶಂಕರ್ ಹಂಚಿ , ವೀರೇಶ್ ಮೇಟಿ ಮತ್ತು  ಶಶಿಕಾಂತ್ ಎಂ ರವರು ಮಾಹಿತಿಯನ್ನು ನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ಮನೋಹರ ಇವರು ಮಾತನಾಡುತ್ತ  ಕಾರ್ಯಕ್ರಮದ ಉದ್ದೇಶ ಮತ್ತು ಅದರ ಸದುಉಪಯೋಗದ ಬಗ್ಗೆ  ವಿವರಿಸಿದರು.
ಪ್ಲೇಸ್‌ಮೆಂಟ್ ಸೆಲ್ ಸಂಯೋಜಕರಾದ ಡಾ.ವಿನೋದ್‌ಕುಮಾರ್,  ಜಿ ಮಲ್ಲನಗೌಡ, ಡಾ.ರವಿಕುಮಾರ್ ನಾಯ್ಕ.ಟಿ.ಆರ್,  ಶರಣಬಸವ ಮತ್ತು ಇತರೆ ಬೋಧಕ ಸಿಬ್ಬಂಧಿಯವರು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.