ಒಕ್ಕೂಟ ವ್ಯವಸ್ಥೆಯ ಬಜೆಟ್‌ನಲ್ಲಿ ಎಲ್ಲ ವರ್ಗಗಳಿಗೂ ಪ್ರಾಶಸ್ಯ ನೀಡಬೇಕು- ಡಾ.ಟಿ.ಆರ್.ಚಂದ್ರಶೇಖರ್
ಸಂಜೆವಾಣಿ ವಾರ್ತೆ
ಬಳ್ಳಾರಿ ಜು.೩೦, ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂಬ ಭೇದ ಭಾವವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎಷ್ಟು ಅಧಿಕಾರ, ಹಕ್ಕುಗಳು ಇರುತ್ತವೆಯೋ ಅಷ್ಟೇ ಅಧಿಕಾರ ಮತ್ತು ಹಕ್ಕುಗಳು ರಾಜ್ಯ ಸರ್ಕಾರಗಳಿಗೂ ಇರುತ್ತವೆ. ಬಜೆಟ್ ಹಂಚಿಕೆ ಮಾಡುವ ಸಂದರ್ಭದಲ್ಲಿ ಎಲ್ಲ ವರ್ಗಗಳಿಗೆ ಪ್ರಾಶಸ್ತ್ಯವನ್ನು ನೀಡಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಟಿ.ಆರ್.ಚಂದ್ರಶೇಖರ್ ಅವರು ತಿಳಿಸಿದರು.
ಅವರು ಮಂಗಳವಾರದಂದು ಬೆಳಿಗ್ಗೆ ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `೨೦೨೪-೨೫ನೇ ಸಾಲಿನ ಬಜೆಟ್’ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಸಂವಿಧಾನದ ಸಮವರ್ತಿತ ಪಟ್ಟಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಮಾನವಾದ ಹಕ್ಕುಗಳನ್ನು ನೀಡಲಾಗಿದೆ. ಸರ್ಕಾರವು ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆಗಳನ್ನು ನಿರೀಕ್ಷಿಸುತ್ತದೆ. ಕೆಲವೊಮ್ಮೆ ಸರ್ಕಾರಗಳಿಗೆ ಅನಿರೀಕ್ಷಿತವಾಗಿ ವೆಚ್ಚಗಳು ಎದುರಾಗುತ್ತವೆ. ಉದಾಹರಣೆಗೆ ಪ್ರಸ್ತುತ ಮಲೆನಾಡಿನಲ್ಲಿ ನಡೆಯುತ್ತಿರುವ ಮಳೆಯ ಪರಿಣಾಮ, ಪ್ರವಾಹ. ಇಂತಹ ಸಮಸ್ಯೆಗಳನ್ನು ಎದುರಿಸಲು ಸರ್ಕಾರಗಳು ಸಾಲವನ್ನು ಮಾಡುತ್ತವೆ ಎಂದರು. 
ಸರ್ಕಾರಗಳು ಕಂದಾಯ ವೆಚ್ಚ ಮತ್ತು ಬಂಡವಾಳ ವೆಚ್ಚಗಳನ್ನು ಮಾಡುತ್ತದೆ. ಆದರೆ ಕಂದಾಯ ವೆಚ್ಚಗಳನ್ನು ಅತಿ ಹೆಚ್ಚಾಗಿ ಮಾಡುತ್ತದೆ. ಆದರೆ ಬಂಡವಾಳ ವೆಚ್ಚಗಳನ್ನು ಕಡಿಮೆ ಮಾಡುತ್ತಿದೆ. ಪ್ರಸ್ತುತ ಕೇಂದ್ರ ಸರ್ಕಾರವು ಕಂದಾಯ ವೆಚ್ಚವನ್ನು ಜಾಸ್ತಿ ಮಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಉದ್ಯೋಗ ಸೃಷ್ಟಿಸಬೇಕು. ಆದರೆ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಬಹುಮತ ಲಭಿಸಿಲ್ಲ. ಏಕೆಂದರೆ ಜನರ ಸಮಸ್ಯೆಯನ್ನು ನಿರ್ವಹಿಸಿಲ್ಲ ಎಂಬ ಕಾರಣವೂ ಇರಬಹುದು ಎಂದು ನುಡಿದರು.
ಐವತ್ತು ವರ್ಷಗಳಲ್ಲಿ ಇಲ್ಲದಿರುವ ನಿರುದ್ಯೋಗ ಸಮಸ್ಯೆ ಪ್ರಸ್ತುತ ಹೆಚ್ಚಿದೆ. ಚುನಾವಣೆಯಲ್ಲಿ ಬಹುಮತ ನೀಡಿಲ್ಲವೆಂದು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಐದು ಕಾರ್ಯಕ್ರಮಗಳ ಗುಚ್ಛವನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಇದು ಕನಿಷ್ಠ ಉದ್ಯೋಗಕ್ಕೆ ಆದ್ಯತೆ ನೀಡಿದಂತಾಗಿದೆ. ಇವು ಕೂಡ ಉದ್ಯೋಗ ನೀಡುವ ಕಾರ್ಯಕ್ರಮಗಳಲ್ಲ. ಉದ್ಯೋಗ ಸೃಷ್ಟಿಸಲು ಉತ್ತೇಜನ ನೀಡುವುದಾಗಿದೆ. ೨೦೦೬ರಲ್ಲಿ ಪ್ರಾರಂಭವಾದ ಉದ್ಯೋಗ ಖಾತ್ರಿ ಯೋಜನೆಯಡಿ ೧೦೦ ದಿನಗಳ ಉದ್ಯೋಗವನ್ನು ನೀಡುವುದಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡಜನರು ತೊಂದರೆಗೆ ಒಳಗಾಗಿ ಅಸಮಾಧಾನಗೊಂಡಿದ್ದಾರೆ. ಸಮಾಜದ ಅಂಚಿನಲ್ಲಿರುವವರನ್ನು ಸರ್ಕಾರ ಗಮನಹರಿಸಿಲ್ಲವೆಂಬುದಕ್ಕೆ ಚುನಾವಣೆಯೇ ಸಾಕ್ಷಿಯಾಗಿದೆ ಎಂದರು. 
೨೦೨೪-೨೫ನೇ ಸಾಲಿನ ಕೇಂದ್ರದ ಬಜೆಟ್ ನಗರ ಕೇಂದ್ರಿತ ಬಜೆಟ್ ಆಗಿದೆ. ವಲಸೆ ಏಕೆ ಆಗುತ್ತಿದೆ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಇಲ್ಲದಿದ್ದರೆ ಜನರು ನಗರಕ್ಕೆ ವಲಸೆ ಹೋಗುತ್ತಾರೆ. ಈ ಬಾರಿಯ ಬಜೆಟ್‌ನಲ್ಲಿ ಕುಶಲತೆಯ ಬಗ್ಗೆ ತುಂಬಾ ಕಾರ್ಯಕ್ರಮಗಳಿವೆ. ಆದರೆ ಕೌಶಲ್ಯ ತರಬೇತಿಯೇ ಹೊರತು ನಿರುದ್ಯೋಗ ನಿವಾರಿಸುವ ಕ್ರಮವಿಲ್ಲ. ಬಜೆಟ್ ಆದ ಮೇಲೆ ಪತ್ರಿಕೆಗಳಲ್ಲಿ ಯಾವ ವಲಯಕ್ಕೆ ಎಷ್ಟೆಷ್ಟು ಹಣ ನೀಡಲಾಗಿದೆ ಎಂಬು ವಿವರ ದೊರೆಯುತ್ತದೆ. ಬಜೆಟ್‌ನಲ್ಲಿ ಉಳ್ಳವರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆದರೆ ಕಡುಬಡವರರ ಬಗ್ಗೆ, ಶತಶತಮಾನಗಳಿಂದ ಶೋಷಣೆಗೆ ಒಳಗಾದವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನರಿಗೆ ಉಪಯೋಗವಿಲ್ಲವೆಂದು ಹೇಳಿದರು.
ಒಂದು ರಾಜಕೀಯ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಗಳು ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎಂದು ಹೇಳಿದ್ದಾರೆ. ಆದರೆ ಅಭಿವೃದ್ಧಿ ಎಂದರೆ ಕಟ್ಟಡ, ರಾಷ್ಟಿçÃಯ ಹೆದ್ದಾರಿ ನಿರ್ಮಿಸುವುದು ಮಾತ್ರ ಅಭಿವೃದ್ಧಿ ಅಲ್ಲ. ಆರ್ಥಿಕ ಸಮೃದ್ಧತೆ ಎಂದರೆ ಸಮಗ್ರ ಜನರ ಸಮೃದ್ಧಿಯಾಗಬೇಕು. ಆರೋಗ್ಯ, ಶಿಕ್ಷಣ, ಸಮಾಜಸೇವೆಗೆ ಒತ್ತು ನೀಡಬೇಕು ಎಂದರು.
ಕೇಂದ್ರ ಸರ್ಕಾರವು ನ್ಯಾಷನಲ್ ಹೆಲ್ತ್ ಸರ್ವೇ ಸಂಸ್ಥೆಯು ಪ್ರತಿ ಐದು ವರ್ಷಕ್ಕೊಮ್ಮೆ ಆರೋಗ್ಯ ಸ್ಥಿತಿಯ ಬಗ್ಗೆ ಸಮೀಕ್ಷೆಯನ್ನು ಮಾಡುತ್ತಿದೆ. ದೇಶದ ೫ನೇ ಸಮೀಕ್ಷೆ ೨೦೧೯-೨೦ರಲ್ಲಿ ನಡೆದಿದೆ. ಈ ಸಮೀಕ್ಷೆಯಲ್ಲಿ ಬಳ್ಳಾರಿ, ರಾಯಚೂರು ಭಾಗದ ಮಹಿಳೆ ಮತ್ತು ಮಕ್ಕಳಲ್ಲಿ ಅನಿಮೀಯತೆ ಹೆಚ್ಚಿದೆ. ಇದರಿಂದ ಬೌದ್ಧಿಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯು ತಿಳಿಸಿದೆ. ಹಾಗಾಗಿ ದಕ್ಷಿಣ ಕರ್ನಾಟಕದ ಭಾಗದ ಮಕ್ಕಳಿಗಿಂತ ಈ ಭಾಗದ ಮಕ್ಕಳು ಬೌದ್ಧಿಕತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಆ ಕಾರಣಕ್ಕಾಗಿಯೇ ಈ ಭಾಗದ ಮಕ್ಕಳು ವಿಜ್ಞಾನ ವಿಷಯವನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳದೆ ಕಲಾ ಮತ್ತು ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಪದವಿ ಪೂರೈಸುತ್ತಿದ್ದಾರೆ ಅಂಶವನ್ನು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಮಂಜುನಾಥರೆಡ್ಡಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪರೀಕ್ಷಾ ನಿಯಂತ್ರಕರಾದ ಡಾ.ಶೋಭಾರಾಣಿ, ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಹೊನ್ನೂರಾಲಿ, ಅರ್ಥಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಹುಚ್ಚೂಸಾಬ್ ಪಿ, ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೃಷ್ಣ, ಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತ ಪದವಿ ವಿದ್ಯಾರ್ಥಿಗಳು ಮತ್ತು ಸ್ನಾತಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿದರು. ಡಾ.ಶ್ರೀನಿವಾಸರೆಡ್ಡಿ ಬಿ ಅವರು ಸ್ವಾಗತಿಸಿದರು. ಡಾ.ಹೊನ್ನೂರಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಹುಚ್ಚೂಸಾಬ್ ಅವರು ಮುಖ್ಯ ಭಾಷಣಕಾರರಾದ ಡಾ.ಟಿ.ಆರ್.ಚಂದ್ರಶೇಖರ್ ಅವರನ್ನು ಸಭೆಗೆ ಪರಿಚಯಿಸಿದರು. ವೀರೇಶಯ್ಯಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶ್ರೀನಿವಾಸ್ ಅವರು ವಂದನಾರ್ಪಣೆ ಮಾಡಿದರು.