ಕುಷ್ಠರೋಗ ಅಭಿಯಾನಕ್ಕೆ ಚಾಲನೆ
ಮುನವಳ್ಳಿ,ಜು೩೧: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ೨೪ರ ಅಂಗವಾಗಿ ಉದ್ಘಾಟನಾ ಸಮಾರಂಭ ಜರುಗಿತು.
ಡಾ. ಎಸ್.ಎಲ್.ದಂಡಗಿ ಮಾತನಾಡಿ ಜುಲೈ೨೯ ರಿಂದ ಅಗಸ್ಟ್ ೧೪ ರವರೆಗೆ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ ಪಟ್ಟಣದ ೧೫ ಟೀಮ್ ಗಳ ಮೂಲಕ ೪೩೯೮ ಮನೆಗಳ ಸಮೀಕ್ಷೆ ಮೂಲಕ ಕುಷ್ಠ ರೋಗದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಡಾ. ಆರ್.ಎಸ್. ಚಿಟ್ನಿಸ ಮಾತನಾಡಿ ಸದರಿ ಅಭಿಯಾನದಲ್ಲಿ ಕುಷ್ಟರೋಗದ ಬಗ್ಗೆ ಮಾಹಿತಿಯನ್ನು ನೀಡುವುದು ಹಾಗೂ ಕುಷ್ಟರೋಗಿಗಳನ್ನ ಗುರುತಿಸುವುದು ವೈದ್ಯರಿಂದ ತಪಾಸಣೆ ಮಾಡಿ ಚಿಕಿತ್ಸೆ ಪಡೆಯುವದು ಹಾಗೂ ಕುಷ್ಠರೋಗಕ್ಕೆ ಸಮಾಜದಲ್ಲಿ ಕಳಂಕ ತಾರತಮ್ಯ ಹೋಗಲಾಡಿಸುವುದು ಎಂದು ತಿಳಸಿದಿರು.
ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಆಯ್.ಆರ.ಗಂಜಿ ಮಾತನಾಡಿ ಕುಷ್ಟರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಸೋಂಕು ಒಬ್ಬರಿಂದ ಒಬ್ಬರಿಗೆ ಸೋಂಕಿತ ಗಾಳಿಯ ಮುಖಾಂತರ ಹರಡುವುದು ಮೈಕೋ ಬ್ಯಾಕ್ಟೀರಿಯಾ ಲೆಪ್ರೆ ಎಂಬ ರೋಗಾಣು ಕುಷ್ಟರೋಗ ಹರಡಲು ಕಾರಣವಾಗಿದೆ. ಇದರ ಲಕ್ಷಣಗಳೆಂದರೆ ಮೈ ಮೇಲೆ ತಿಳಿ ಬಿಳಿ ತಾಮ್ರವರ್ಣದ ಸ್ಪರ್ಶ ಜ್ಞಾನ ವಿಲ್ಲದ ಕಲೆಗಳು ಆ ಭಾಗದಲ್ಲಿ ಕೂದಲುಗಳ ಬೆಳವಣಿಗೆ ಕಡಿಮೆಯಾಗುವುದು, ಕೈಕಾಲುಗಳಲ್ಲಿ ಜೋಮ್ ಹಿಡಿಯುವುದು, ಕಿವಿ ಹಾಲೆ ದಪ್ಪ ಆಗುವುದು, ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಆಶಾಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಯವರನ್ನು ಸಂಪರ್ಕಿಸುವುದು ಹಾಗೂ ಇದಕ್ಕೆ ಸಂಬಂದಿಸಿದ ಎಂ.ಡಿ.ಟಿ ಔಷಧಿಯನ್ನು ರೋಗದ ಪ್ರಕಾರಗಳ ಆಧಾರದ ಮೇಲೆ ಆರು ತಿಂಗಳ ಹಾಗೂ ಒಂದುವರ್ಷ ತೆಗೆದುಕೊಂಡಲ್ಲಿ ಕುಷ್ಟರೋಗ ಸಂಪೂರ್ಣ ಗುಣವಾಗುವುದು ಎಂದರು.
ಆರೋಗ್ಯ ಇಲಾಖೆಯ ಜಿ.ಎಲ್.ಭಂಡಾರಿ, ಎಸ್.ಬಿ.ಕಾಡಯ್ಯನವರ, ಮೇಘಾ ಜಯಶೀಲಾ, ಹೆಚ್.ಎನ್.ವಿಶ್ವಾಸ ಹಿರೇಮಠ, ಹಾದಿಮನಿ ಆಶಾ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗ ಸಾರ್ವಜನಿಕರು ಉಪಸ್ಥಿತರಿದ್ದರು.
ಸುಭಾಸ ಹುಜರತ್ತಿ ಕಾರ್ಯಕ್ರಮ ನಿರೂಪಿಸಿದರು, ಆಯ್.ಹೆಚ್.ಬೆಟಗೇರಿ ಸ್ವಾಗತಿಸಿ ವಂದಿಸಿದರು.