ಪರಿಹಾರ ನೀಡಲು ಆಗ್ರಹ
ಲಕ್ಷೆ÷್ಮÃಶ್ವರ,ಜು೩೧: ತಾಲೂಕಿನಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆ ವಿಪರೀತ ಮಳೆಯಿಂದಾಗಿ ಹಾಳಾಗುತ್ತಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಈಗ ಹಲವು ಕಡೆ ಕುಯ್ಲು ಹಂತಕ್ಕೆ ಬಂದಿದ್ದು ಆದರೆ ಕಳೆದ ಒಂದುವರೆ ತಿಂಗಳದಿಂದ ಸುರಿಯುತ್ತಿರುವ ತುಂತುರು ಮಳೆಗೆ ಬೆಳೆ ಕೊಳೆಯುತ್ತಿದ್ದು ಹೆಸರು ಕಾಯಲ್ಲಿನ ಹೆಸರು ಮೊಳಕೆ ನಾಟುತ್ತಿದೆ.
ಕೃಷಿ ಇಲಾಖೆ ಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜುಲೈ ತಿಂಗಳಲ್ಲಿ ವಾಡಿಕೆಯ ಮಳೆ ೨೬೧ ಮಿಲಿ ಮೀಟರ್ ಇತ್ತು ಆದರೆ ಇದುವರೆಗೆ ೨೮೫ ಮಿಲಿಮೀಟರ್ ಮಳೆಯಾಗಿದ್ದು ರೈತರನ್ನು ಈ ಮಳೆ ಕಣ್ಣೀರಿನ ಹೊಳೆ ಹರಿಯುವಂತೆ ಮಾಡಿದೆ ಶ್ರಮಪಟ್ಟು ಉತ್ತಿ ಬಿತ್ತಿ ಬೆಳೆದ ಹೆಸರು ಬೆಳೆ ಈ ಬಾರಿಯೂ ಕೈಗೆ ಸಿಗದಂತಾಗುತ್ತಿರುವುದು ರೈತರ ದುರಾದೃಷ್ಟ ಎನ್ನಬೇಕು.
ಒಟ್ಟು ತಾಲೂಕಿನಲ್ಲಿ ೬೩೪೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಈಗ ಫಸಲು ಬಂದಿದ್ದು ಕೈಗೆ ಬರದಂತಾಗಿದೆ. ಮುಕ್ತಿಮಂದಿರ ರಸ್ತೆಗೆ ಹೊಂದಿಕೊಂಡಂತೆ ಈರಪ್ಪ ಶಂಕ್ರಪ್ಪ ಬೊಮ್ಮನಹಳ್ಳಿ ಎಂಬೋರಿಗೆ ಸೇರಿದ ಎರಡು ಎಕರೆ ಪ್ರದೇಶದಲ್ಲಿನ ಹೆಸರು ಬೆಳೆ ಸಂಪೂರ್ಣ ಹಾಳಾಗಿದ್ದು ಕಾಳುಗಳು ಹಳದಿಯಾಗಿ ಮೊಳಕೆ ಒಡೆದಿವೆ.
ಈ ಕುರಿತಂತೆ ರೈತ ಈರಣ್ಣ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿ ಪ್ರತಿ ಎಕರೆಗೆ ೧೦,೦೦೦ ಗಳಂತೆ ಖರ್ಚು ಮಾಡಿದ್ದು ೨೦,೦೦೦ ಎರಡು ಎಕರೆಗೆ ಖರ್ಚಾಗಿದೆ ಈಗ ಬೆಳೆ ಸಂಪೂರ್ಣ ಹಾಳಾಗಿದೆ ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕುರಿತಂತೆ ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷ ಸುನಿಲ್ ಮಹಾಂತ ಶೆಟ್ಟರ ಅವರು ವಿಪರೀತ ಮಳೆಯಿಂದಾಗಿ ಹೆಸರು ಬೆಳೆ ಹಾಳಾಗುತ್ತಿದ್ದು ಸರ್ಕಾರ ಈ ಕೂಡಲೇ ಹೆಸರು ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಂಡು ಹಾನಿಗೀಡಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದ್ದಾರೆ.