ಗ್ರಂಥಾಲಯಗಳಿಗೆ ಪ್ರಬೋಧ ಸೇವಾ ಸಮಿತಿಯಿಂದ ತ್ರೈತ ಸಿದ್ಧಾಂತದ ಆಧ್ಯಾತ್ಮಿಕ ಗ್ರಂಥಗಳ ಉಚಿತ ವಿತರಣೆ
ಕೋಲಾರ,ಜು,೩೧- ಜಿಲ್ಲೆಯಲ್ಲಿ ಒಟ್ಟು ೧೫೪ ಗ್ರಂಥಾಲಯಗಳಿಗೂ ಪ್ರಬೋಧ ಸೇವಾ ಸಮಿತಿಯಿಂದ ತ್ರೈತ ಸಿದ್ಧಾಂತದ ಆಧ್ಯಾತ್ಮಿಕ ಗ್ರಂಥಗಳ ವಿತರಣೆ ಮಾಡಲು ಕ್ರಮವಹಿಸಿದ್ದು ಈಗಾಗಲೇ ನಾಲ್ಕು ತಾಲ್ಲೂಕುಗಳಿಗೆ ವಿತರಣೆ ಕಾರ್ಯ ಮುಗಿದಿದೆ ಎಂದು ಪ್ರಬೋಧ ಸೇವಾ ಸಮಿತಿ ಕೋಲಾರ ಶಾಖೆ ವತಿಯಿಂದ ಹಮ್ಮಿಕೊಂಡಿದ್ದು ಸಮಿತಿ ಅಧ್ಯಕ್ಷ ವೆಂಕಟರಾಯಪ್ಪ ಹಾಗೂ ಸದಸ್ಯ ಚಂದ್ರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸೇವಾ ರೂಪದಲ್ಲಿ ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿತ್ತು, ಅದರಂತೆ ಈಗಾಗಲೇ ಕೋಲಾರ, ಬಂಗಾರಪೇಟೆ, ಕೆ.ಜಿ.ಎಫ್ ಮುಳಬಾಗಿಲು ತಾಲ್ಲೂಕಿನ ಗ್ರಂಥಾಲಯಗಳಿಗೆ ಖುದ್ದು ಭೇಟಿ ನೀಡಿ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ತ್ರೈತ ಸಿದ್ಧಾಂತ ಆದಿಕರ್ತ, ಇಂದೂ ಜ್ಞಾನ ಧರ್ಮ ಪ್ರಧಾತ, ತ್ರಿಮತ ಏಕೈಕ ಗುರುವು, ಆದ್ಯಾತ್ಮಿಕ ಸಾಮಾಜ್ಯ ಚಕ್ರವರ್ತಿ ಶ್ರೀ ಆಚಾರ್‍ಯ ಪ್ರಬೋಧಾನಂದ ಯೋಗೀಶ್ವರರು ಆಧ್ಯಾತ್ಮಿಕ ವಿಧ್ಯೆಯಲ್ಲಿ ತ್ರೈತ ಸಿದ್ಧಾಂತವನ್ನು ಆಧಾರ ಮಾಡಿಕೊಂಡು ಭಗವದ್ಗೀತೆ ಮತ್ತು ಗೀತೆಗೆ ಅನುಸಂಧಾನವಾದ ಸುಮಾರು ೧೦೦ ಕ್ಕೂ ಆಧ್ಯಾತ್ಮಿಕ ಗ್ರಂಥಗಳನ್ನು ರಚಿಸಿದ್ದಾರೆ ಎಂದರು.
ಇದುವರೆವಿಗೂ ಮಾನವನ ಮೇಧಸ್ಸಿಗೆ ಅಂತ್ಯ ಸಿಗದೇ ಎಷ್ಟೋ ಆಧ್ಯಾತ್ಮಿಕ ರಹಸ್ಯಗಳ ಗುಟ್ಟುಗಳಾದ ಜನನ-ಮರಣ ಸಿದ್ಧಾಂತದ ರಹಸ್ಯ, ಮೋಕ್ಷ, ಶ್ರೀಕೃಷ್ಣನ ಜನ್ಮ ರಹಸ್ಯ, ದೇವಾಲಯ ರಹಸ್ಯಗಳು, ಇಂದೂ ಸಂಪ್ರದಾಯಗಳ ಅಂತಾರ್ಥ ಇನ್ನಿತರೆ ವಿಷಯಗಳ ಬಗ್ಗೆ ಶಾಸ್ತ್ರಬದ್ದವಾಗಿ, ವಿಜ್ಞಾನ ಸಹಿತವಾಗಿ, ಹೇತುಬದ್ದವಾದ ವಿಷಯಗಳನ್ನು ಗ್ರಂಥ ರೂಪದಲ್ಲಿ ರಚಿಸಿರುತ್ತಾರೆ ಎಂದು ತಿಳಿಸಿದರು
ಈ ಹಿನ್ನೆಲೆಯಲ್ಲಿ ಇಂತಹ ಆಧ್ಯಾತ್ಮಿಕ ಗ್ರಂಥಗಳನ್ನು ಗ್ರಾಮೀಣ ಭಾಗದಲ್ಲಿರುವ ಗ್ರಂಥಾಲಯಗಳಿಗೆ ಒದಗಿಸುವುದರಿಂದ ಕೆಲವು ಜ್ಞಾನ ಜಿಜ್ಞಾಸಿಗಳು ಆಧ್ಯಾತ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಲಿಕ್ಕೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಗ್ರಂಥಾಲಯಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಗಿದೆ ಎಂದು ಹೇಳಿದರು.
ಪುಸ್ತಕ ವಿತರನೆ ಕಾರ್ಯಕ್ರಮದಲ್ಲಿ ಪ್ರಬೋಧ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಾಯಪ್ಪ ಮತ್ತು ಸಮಿತಿ ಸದಸ್ಯರಾದ ಚಂದ್ರು, ಭರತ್, ಕೋದಂಡಪ್ಪ, ಗಂಗರಾಜ್, ಮುರಳಿ, ಕುಮಾರ್, ಮಧು, ಪಾರ್ಥ ಸಾರಥಿ, ವೆಂಕಟ್, ಮಹೇಂದ್ರ, ಕದಿರೆಪ್ಪ ನಂಜಮ್ಮ, ಪುಟ್ಟಮ್ಮ, ಗಾಯಿತ್ರಮ್ಮ, ಅಂಬಿಕ, ಕಲಾವತಿ ಪಾಲ್ಗೊಂಡಿದ್ದರು.