ಶಿಕ್ಷಕಭರತ್ ಕುಮಾರ್‌ಗೆ ಗೌರವ ಡಾಕ್ಟರೇಟ್
ಕೋಲಾರ,ಜು,೩೧- ನಗರದ ಮಾಸ್ತಿ ಬಡಾವಣೆಯ ನಿವಾಸಿಯಾದ ನಾರಾಯಣಸ್ವಾಮಿ ಮತ್ತು ಅರುಣ ದಂಪತಿಗಳ ಮಗನಾದ ಬಿ.ಎನ್.ಭರತ್ ಕುಮಾರ್ ರವರು ಶಿಕ್ಷಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ವಿವಿಧ ಸಂಘಸಂಸ್ಥೆಗಳಲ್ಲಿ ಸಲ್ಲಿಸಿದ ಸಮಾಜ ಸೇವೆಯನ್ನು ಗುರುತಿಸಿ ಏಷಿಯಾ ಇಂಟರ್ನ್ಯಾಷನಲ್ ಕಲ್ಚರಲ್ ಯೂನಿವರ್ಸಿಟಿಯವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎನ್.ಭರತ್ ಕುಮಾರ್ ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪ್ರಸ್ತುತ ಶಿಕ್ಷಕರಾಗಿ, ಕರ್ನಾಟಕ ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಕೋಲಾರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಸಮಾಜ ಸೇವೆ ಹೀಗೆ ಮುಂದುವರೆಯಲೆಂದು ಸಹಶಿಕ್ಷಕರು ಹಾಗೂ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ಗೆಳೆಯರು ಬಂಧು ಬಳಗದವರು ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಸ್ಟರ್ ವಿ ಬಾಬು ವಿಜಯನ್ ಅಡ್ವೈಸರಿ ಬೋರ್ಡ್ ಚೇರ್ಮನ್.ಎಐಸಿಎ, ಡಾ. ಕೆ.ಎ.ಮನೋಕರಣ್, ಮಾಜಿ ಶಾಸಕರು ಡಾ.ಎಸ್. ಜ್ಞಾನಶೇಖರ್, ಪೊಲೀಸ್ ಇನ್ಸ್‌ಪ್ಪೆಕ್ಟರ್ ಡಾ.ಕುಮಾರ, ಗುರು ಕರ್ನಾಟಕ ಹೈಕೋರ್ಟ್ ಬೆಂಗಳೂರು, ಡಾ. ಚೆರ್ಲ್ಲಾ ಪ್ರಕಾಶ್ ಮಾನವ ಹಕ್ಕುಗಳ ಪ್ರಜಾ ಆಯೋಗ ತೆಲಂಗಾಣ ಮತ್ತು ಡಾ. ಎಸ್.ರವಿಚಂದನ್ ಸ್ವಾಮೀಜಿಗಳು ಸೇರಿದಂತೆ ಗಣ್ಯರು, ಕುಟುಂಬದವರು ಉಪಸ್ಥಿತರಿದ್ದರು.