ಶಾಸಕ ಸ್ಥಾನದ ಘನತೆಗೆ ಶೋಭೆ ತರುವುದಿಲ್ಲ
ಕೋಲಾರ,ಜು,೩೧- ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಅಧಾರ ರಹಿತವಾದ ಸತ್ಯಕ್ಕೆ ದೂರವಾದ ಅರೋಪಗಳನ್ನು ನನ್ನ ವಿರುದ್ದ ಮಾಡುತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ, ಯಾವೂದಾದರೂ ಅರೋಪಗಳನ್ನು ಮಾಡುವುದಿದ್ದರೆ ದಾಖಲೆಗಳ ಸಮೇತ ಮಾಡಲಿ, ಯಾವೂದೇ ದಾಖಲೆಗಳಿಲ್ಲದೆ ಅರೋಪಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುತ್ತಿರುವುದು ಸಮಂಜಸವಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರಾದ ಎಂ.ನಾರಾಯಣಸ್ವಾಮಿ ಕಿಡಿ ಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮೊನ್ನೆ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ನನ್ನ ವಿರುದ್ದವಾಗಿ ಬಹಿರಂಗ ಸಭೆಯಲ್ಲಿ ಕೆಂಪೇಗೌಡ ಬಗ್ಗೆ ಸಂದೇಶಗಳನ್ನು ನೀಡದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಚುನಾವಣೆಗೆ ನೀಡಿದ ೯ ಕೋಟಿ ಹಣವನ್ನು ಕೀರ್ತಿ ಪೈನಾನ್ಸ್‌ನಲ್ಲಿ ಬಡ್ಡಿಗೆ ನೀಡಿದ್ದಾರೆ. ಯಲಹಂಕ, ಹೆಬ್ಬಾಳದಲ್ಲಿ ನಿವೇಶ,ಮನೆಗಳು ಆಸ್ತಿಪಾಸ್ತಿಗಳನ್ನು ಅಕ್ರಮವಾಗಿ ಮಾಡಿದ್ದಾರೆ ಎಂದು ಸುಳ್ಳು ಅರೋಪಗಳನ್ನು ಮಾಡಿದ್ದಾರೆ. ಅವರು ಮಾಡಿರುವಂತ ಅರೋಪಗಳಿಗೆ ದಾಖಲೆಗಳು ನೀಡಿದರೆ ಆ ಆಸ್ತಿಗಳನೆಲ್ಲಾ ದಾನ ಮಾಡಿಬಿಡುತ್ತೇನೆ ಎಂದು ಸವಾಲು ಹಾಕಿದರು.
ನಾನು ೪ ಬಾರಿ ಶಾಸಕನಾಗಿದ್ದೆ ಯಾವೂದೇ ಆಸ್ತಿಪಾಸ್ತಿಗಳನ್ನು ಮಾಡಿಲ್ಲ. ನಾನೊರ್ವ ಕೃಷಿಕ, ನನ್ನ ಪತ್ನಿ ರೈತ ಮಹಿಳೆ ನಮಗೆ ಕೃಷಿಯಲ್ಲಿ ಆಲೂಗಡ್ಡೆ,ಬಾಳೆ, ರೇಷ್ಮೆ,ಹೈನುಗಾರಿಕೆ ಮುಂತಾದವುಗಳಲ್ಲಿ ಅದಾಯವಿದೆ ಇದಕ್ಕೆಲ್ಲಾ ದಾಖಲೆಗಳಿವೆ. ಅಧಿಕಾರವನ್ನು ದುರ್‍ಬಳಿಸಿ ಕೊಂಡು ಆಸ್ತಿ ಮಾಡುವಂತ ಕರ್ಮ ನನಗೆ ಬಂದಿಲ್ಲ. ಅಧಿಕಾರವನ್ನು ಯಾರು ದುರ್‍ಬಳಿಸಿ ಕೊಂಡು ಆಸ್ತಿಪಾಸ್ತಿ ಗಳನ್ನು ಯಾರು ಮಾಡಿದ್ದಾರೆ ಎಂಬುವುದು ಜನತೆಗೆ ತಿಳಿದಿದೆ ಎಂದ ಅವರು ಕಾನ್ಫೆಫೆಡೆಂಟ್ ಗ್ರೊಪ್ ನಿರ್ದೇಶಕರಾಗಿರುವ ಶಾಸಕರು ಸರ್ಕಾರದ ಜಮೀನುಗಳು, ಕೆರೆಗಳು ಗೋಮಾಳ ಜಮೀನುಗಳು ಯಾರು ಒತ್ತುವರಿ ಮಾಡಿಸಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಎಂಬುವುದು ಈ ಹಿಂದೆ ಜನಜನಿತವಾಗಿರುವ ವಿಷಯವಾಗಿದೆ ಎಂದು ಹೇಳಿದರು,
ಶಾಸಕ ನಾರಾಯಣಸ್ವಾಮಿ ಬೆಂಬಲಿಗರೊಬ್ಬರು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಪರೋಕ್ಷವಾಗಿ ಮುಂದೆ ಇದೇ ಮಾರಿಹಬ್ಬ ಎಂದು ಹೇಳಿದ್ದಾರೆ. ಅದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೮ ಕ್ಷೇತ್ರಗಳ ಪೈಕಿ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರಗಳ ಪೈಕಿ ೨ನೇ ಸ್ಥಾನದಲ್ಲಿ ಇದೆ ಎಂಬುವುದು ಇಷ್ಟು ಬೇಗ ಮರೆತು ಬಿಟ್ಟರೇ? ಎಂದು ಪ್ರಶ್ನಿಸಿದರು.
ಯಾರೊಬ್ಬರು ನಾರಾಯಣಸ್ವಾಮಿ ಯವರನ್ನು ವಕ್ಕಲಿಗ ವಿರೋಧಿ ಎಂದು ಅರೋಪಿಸದಿದ್ದರೂ ಸಹ ತಾನು ವಕ್ಕಲಿಗರ ವಿರೋಧಿಯಲ್ಲ ಎಂದು ಪದೇ ಪದೇ ಹೇಳಿ ಕೊಂಡಿರುವುದು ಹಾಸ್ಯಸ್ಪದವಾಗಿದೆ. ಈ ಹಿಂದಿನ ಶಾಸಕರು ಏನೊಂದು ಅಭಿವೃದ್ದಿ ಮಾಡಿಲಿಲ್ಲ ಎಂದು ದೂರಿದ್ದಾರೆ. ೧೫ ವರ್ಷದ ಹಿಂದೆ ಬಿಜೆಪಿಯಲ್ಲಿ ಹಬ್ಬ ಮಾಡಿದ್ದಾರೆಂದು ಹೇಳಿದ್ದಾರೆ.ಅದರೆ ಗಾಲ್ಫೆ ಕ್ಲಬ್ ವಿಚಾರದಲ್ಲಿ ಹಬ್ಬ ಮಾಡಿ ಕೊಂಡಿರುವುದು ಯಾರು ಸ್ವಾಮಿ ಎಂದು ಪ್ರಶ್ನಿಸಿದರು.
ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಡಿ.ಕೆ.ರವಿ ಮತ್ತು ಮನೋಜ್ ಕುಮಾರ್ ಮೀನಾ ಅವರುಗಳು ಸುಮಾರು ೪೭ ಎಕರೆ ಒತ್ತುವರಿ ಮಾಡಿ ಕೊಂಡಿರುವ ಸಂಬಂಧವಾಗಿ ತನಿಖೆ ನಡೆಸಿ ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧವಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದು ವಿಚಾರ ಹಂತದಲ್ಲಿದೆ. ಆಗಾ ತಮ್ಮ ರಾಜಕೀಯ ಪ್ರಭಾವವನ್ನು ಬಳಿಸಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ಹಬ್ಬ ಮಾಡಿ ಕೊಂಡಿದ್ದು ಯಾರು ? ಎಂಬುವುದು ಜನತೆಗೆ ತಿಳಿಯದೆ ಇರುವಂತ ವಿಷಯವೇನಲ್ಲ ಎಂದು ತಿಳಿಸಿದರು.
ನಾನು ದಿ,ರಾಮಕೃಷ್ಣ ಹೆಗಡೆ, ಸಿ.ಬೈರೇಗೌಡ, ಜೆ.ಹೆಚ್.ಪಾಟೀಲ್ ಅವರ ಗರುಡಿಯಲ್ಲಿ ಬೆಳೆದವನು. ನನ್ನ ಬಳಿ ಇರುವ ಕಾರು ಸಹ ಜನತೆ ನನಗೆ ನೀಡಿದ ಕಾಣಿಕೆಯಾಗಿದೆ. ಜನತೆ ನನಗೆ ಹೆಚ್ಚು ಮತ ನೀಡಿದ ಹೋಬಳಿಗಳಲ್ಲಿ ಶಾಸಕ ನಾರಾಯಣಸ್ವಾಮಿ ಕನಿಷ್ಟ ಒಂದು ಕೊಳವೆ ಬಾವಿ ಸಹ ಕೊರೆಸಿಲ್ಲ. ಸೇಡಿನ ರಾಜಕಾರಣ ಮಾಡುತ್ತಿರುವುದು ಶ್ರೇಯಸ್ಕರವಲ್ಲ. ಚುನಾವಣೆಯಲ್ಲಿ ಗೆಲವು,ಸೋಲು ಸಹಜವಾಗಿ ಪಡೆಯ ಬೇಕು. ರಾಜಕಾರಣ ಚುನಾವಣೆಗೆ ಮೀಸಲಿಟ್ಟು ನಂತರದಲ್ಲಿ ಸಮಾನತೆಯನ್ನು ಕಾಪಾಡಿ ಕೊಂಡು ಜನತೆಯ ಋಣ ತೀರುವ ಕೆಲಸ ಮಾಡುವಂತಾಗ ಬೇಕೆಂದು ಕಿವಿ ಮಾತು ತಿಳಿಸಿದರು.
ಯಾವುದೇ ಅರೋಪಗಳನ್ನು ಮಾಡುವಾಗ ದಾಖಲೆಗಳನ್ನು ಪಡೆದು ಮಾಡಬೇಕು ಹೊರತಾಗಿ ಗಾಳಿಯಲ್ಲಿ ಗುಂಡು ಹೊಡೆಯ ಬಾರದು ಎಂದ ಅವರು ನನಗೆ ಕೃಷಿ ಇಲಾಕೆಯ ಆತ್ಮ ಯೋಜನೆಯಲ್ಲಿ ಶ್ರೇಷ್ಠ ಕೃಷಿಕನಾಗಿ ೯ ಭಾರಿ ಪ್ರಶಸ್ತಿ ಪಡೆದಿರುವುದೇ ನನ್ನ ಅದಾಯಕ್ಕೆ ನಿದರ್ಶನವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು,