ನಕಾರಾತ್ಮದಿಂದ ಸಕಾರಾತ್ಮದೆಡೆಗೆ ಸಾಗಿ:ಅನುಪಮ ಅಗರವಾಲ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೩೧:ಪ್ರತಿಯೊಬ್ಬ ವ್ಯಕ್ತಿ ಯಾವಾಗಲೂ ಪ್ರಗತಿಪಥದಲ್ಲಿ ಸಾಗಬೇಕಾದರೆ ಹಲವಾರು ಋಣಾತ್ಮಕ ಸಂಗತಿಗಳು ಎದುರಾಗುವದು ಸಹಜ. ಆದರೆ ಅವುಗಳನ್ನು ಒಂದೊAದಾಗಿ ಯೋಚಿಸಿ ಮತ್ತು ಯೋಜನೆ ಹಾಕಿಕೊಂಡು ಮುನ್ನಡೆದಾಗ ಯಶಸ್ವಿಯಾಗಲು ಸಾಧ್ಯವೆಂದು ಉದ್ದಿಮೆದಾರ ಅನುಪಮ ಅಗರವಾಲ ಹೇಳಿದರು.
ವಿಜಯಪುರ ಉತ್ತರವಲಯ ಪ್ರೊಬಸ್ ಕ್ಲಬ್‌ನ ೨೦೨೪-೨೫ನೇ ಸಾಲಿನ ನೂತನ ಸದÀಸ್ಯರ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಕೆಲವು ನಕಾರಾತ್ಮಕ ಸಂಗತಿ ಬರೆದು ಅದಕ್ಕೆ ಹತ್ತು ಸಕಾರಾತ್ಮಕ ಪರಿಹಾರ ಬರೆಯಿರಿ ಎಂದು ಹೇಳಿದರು. ಸಕಾರಾತ್ಮಕವಾಗಿ ಉತ್ತರಿಸಿದ ಕೆಲವು ಸದಸ್ಯರಿಗೆ ವಿಷಯದ ಚರ್ಚೆಗೆ ಒಳಪಡಿಸಿದರು. ಸರಿಯಾಗಿ ಉತ್ತರಿಸಿದವರಿಗೆ ಬಹುಮಾನ ನೀಡಿ, ಹಿರಿಯ ನಾಗರಿಕ ಕುರಿತು ಮಾತನಾಡಿದರು. ಅತಿಥತಿಗಳಾದ ದಿಲೀಪ ಪೂಜಾರಿ ಮಾತನಾಡಿದರು.
ನೂತನ ಅಧ್ಯಕ್ಷ ಶಾರದಾ ಐಹೊಳ್ಳಿಯರಿಗೆ ನಿಕಟಪೂರ್ವ ಅಧ್ಯಕ್ಷ ವಿಠ್ಠಲ ತೇಲಿ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ ಮಾದೇವ ಹಾಲಳ್ಳಿ, ಕಾರ್ಯದರ್ಶಿಗಳಾಗಿ ಸುವರ್ಣಾ ತೇಲಿ, ಜಂಟಿ ಕರ‍್ಯದರ್ಶಿಗಳಾಗಿ ಸುಭಾಸ ಬೆಟಗೇರಿ, ಖಜಾಂಚಿಗಳಾಗಿ ಪರಶುರಾಮ ಪೋಳ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿ.ಸಿ.ನಾಗಠಾಣ, ಎಸ್.ಜಿ. ನಾಡಗೌಡ, ಅಕ್ಕಮಹಾದೇವಿ ಬುರ್ಲಿ, ಬಿ.ಎಂ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ನೂತನ ಬ್ಯಾಕೋಡ ಸ್ವಾಗತಿಸಿದರು, ಜಗದೀಶ ಮೋಟಗಿ ವಂದಿಸಿದರು.