ಶ್ರೀ ಮಹದೇಶ್ವರ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ
ಸಂಜೆವಾಣಿ ವಾರ್ತೆ
ಹನೂರು ಜು ೩೧ :- ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಹುಪಾಲು ಪ್ರಶಸ್ತಿಗಳನ್ನು ಕೌದಳ್ಳಿ ಸಂತ ಆಂಟೋನಿಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ.
ಬಾಲಕಿಯರ ವಿಭಾಗದ ತಟ್ಟೆ ಎಸೆತ ,ಉದ್ದ ಜಿಗಿತ ಮತ್ತು ಗುಂಡು ಎಸೆತದಲ್ಲಿ ಭೂಮಿಕಾ ಪ್ರಥಮ ಸ್ಥಾನ ,ತಟ್ಟೆ ಎಸೆತ ಮತ್ತು ಗುಂಡು ಎಸೆತದಲ್ಲಿ ತರನಂ ಫರೀಯ ದ್ವಿತೀಯ,ಉದ್ದ ಜಿಗಿತದಲ್ಲಿ ಕಾವ್ಯ ದ್ವಿತೀಯ,೪೦೦ ಮೀಟರ್ ಓಟ ಮೇಘನಾ ದ್ವಿತೀಯ,ಎತ್ತರ ಜಿಗಿತದಲ್ಲಿ ಅಂಜುಮ್ ಖಾನಂ ಪ್ರಥಮ,ಕವಿತಾ ತೃತೀಯ ಸ್ಥಾನ,೬೦೦ ಮೀಟರ್ ಓಟದಲ್ಲಿ ಕವಿತಾ ದ್ವಿತೀಯ ಸ್ಥಾನ ಬಾಲಕಿಯರ ಥೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ತಟ್ಟೆ ಎಸೆತದಲ್ಲಿ ಸಕ್ಲೈನ್ ಅಹಮದ್ ಪ್ರಥಮ ಸ್ಥಾನ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ.
ಎತ್ತರ ಜಿಗಿತದಲ್ಲಿ ಸೈಯದ್ ಹುಸೇನ್ ಪ್ರಥಮ ಸ್ಥಾನ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ಜಸ್ಟಿನ್,ಮುಖ್ಯ ಶಿಕ್ಷಕರಾದ ಕ್ಸೇವಿಯರ್ ಜಯಶೀಲನ್ ಮತ್ತು ಅರುಲ್ ಮೇರಿ ದೈಹಿಕ ಶಿಕ್ಷಣ ಶಿಕ್ಷಕರಾದ ಆರೋಗ್ಯ ಸ್ವಾಮಿ ಮತ್ತು ಅಲೆಕ್ಸಾಂಡರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.