ಅಕ್ರಮ ಜಮೀನು ಖರೀದಿ, ಮಾರಾಟ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ: ಶಾಸಕ ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೩೧: ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಜಿಲ್ಲೆಯಲ್ಲಿ ಅಕ್ರಮವಾಗಿ ಜಮೀನು, ನಿವೇಶನಗಳನ್ನು ಖರೀದಿ ಮತ್ತು ಮಾರಾಟದ ಕುರಿತಂತೆ ಚರ್ಚೆಗೆ ಬೆಂಗಳೂರು ಮಳೆಗಾಲ ಅಧಿವೇಶನದಲ್ಲಿ ಪ್ರಶ್ನಿಸಲಾಗಿತ್ತು. ಆದರೆ. ಸರ್ಕಾರ ಚರ್ಚೆಗೆ ಅವಕಾಶ ಕಲ್ಪಿಸದೆ, ಲಿಖಿತ ಉತ್ತರ ಮಾತ್ರ ನೀಡಿದ್ದು, ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಈ ಗಂಭೀರ ವಿಷಯದ ಕುರಿತು ಗಮನ ಸೆಳೆಯಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ನಗರದಲ್ಲಿ ಕೆಲವರು ಪತ್ರಿಕಾಗೋಷ್ಠಿ ನಡೆಸಿ, ನಗರ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕೆಂದು ಹೇಳುವ ಮೊದಲೇ, ಅಂದರೆ ಜು.೬ ರಂದು ಪ್ರಶ್ನೆ ಕೇಳಲಾಗಿದ್ದು, ಜು.೨೨ ರಂದು ಕಂದಾಯ ಇಲಾಖೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಜಮೀನು, ನಿವೇಶನಗಳನ್ನು ಖರೀದಿ ಮತ್ತು ಮಾರಾಟ ಮಾಡಿರುವ ಪ್ರಕರಣಗಳೆಷ್ಟು? ಖೊಟ್ಟಿ ದಾಖಲಾತಿ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಎಷ್ಟು ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ? ಮೋಸ ಹೋಗಿರುವ ಮಾಲೀಕರಿಗೆ ಆಸ್ತಿಗಳನ್ನು ಮರಳಿಸಲಾಗಿದೆಯೇ? ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಕೈಗೊಳ್ಳಲಿರುವ ಕ್ರಮಗಳೇನು? ಈ ರೀತಿಯಾಗಿ ಪ್ರಶ್ನೆ ಕೇಳಲಾಗಿತ್ತು.
ಇದಕ್ಕೆ ಕಂದಾಯ ಸಚಿವರು, ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು ಐದು ಉಪನೋಂದಣಿ ಕಚೇರಿಗಳಿದ್ದು, ಈ ಪೈಕಿ ವಿಜಯಪುರ ಮತ್ತು ಇಂಡಿ ಉಪನೋಂದಣಿ ಕಚೇರಿಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ೨ ದಸ್ತಾವೇಜುಗಳು ನೋಂದಣಿಯಾಗಿದ್ದು, ಈ ಬಗ್ಗೆ ತತ್ಸಬಂಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಗಳು ದಾಖಲಾಗಿರುತ್ತವೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ.
ಖೊಟ್ಟಿ ಸುಳ್ಳು ಸ್ಪಷ್ಟನೆ ದಾಖಲಾತಿಗಳ ಆಧಾರದ ಮೇಲೆ ದಸ್ತಾಮೇಜು ನೋಂದಣಿ ತಡೆಗಟ್ಟಲು, ಸುಳ್ಳು ಸ್ಪಷ್ಟನೆ ದಸ್ತಾವೇಜುಗಳನ್ನು ನೋಂದಣಿ ಮಾಡಲು ನಿರಾಕರಿಸಲು ಹಾಗೂ ಜಿಲ್ಲಾ ನೋಂದಣಾಧಿಕಾರಿರವರು ಸಂಬAಧಪಟ್ಟ ಪಕ್ಷಾಕಾರರಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ದಸ್ತಾವೇಜಿನ ನೋಂದಣಿಯನ್ನು ರದ್ದುಪಡಿಸಲು ನೋಂದಣಿ ಕಾಯ್ದೆ ೧೯೦೮ ಗೆ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೨೩ (೨೦೨೩ರ ವಿಧಾನಸಭೆಯ ವಿಧೇಯಕ ಸಂಖ್ಯೆ-೧೧) ರನ್ವಯ ಹೊಸದಾಗಿ ಕಲಂ ೨೨-ಬಿ, ೨೨-ಸಿ ಮತ್ತು ೨೨-ಡಿ ಯನ್ನು ಸೇರ್ಪಡೆ ಮಾಡಲು ಕ್ರಮವಹಿಸಲಾಗಿದ್ದು, ಈ ತಿದ್ದುಪಡಿಗೆ ಘನವೆತ್ತ ರಾಷ್ಟçಪತಿಯವರ ಅಂಕಿತ ಬಾಕಿ ಇರುತ್ತದೆ ಎಂದು ಹೇಳಿದ್ದಾರೆ.
ದಸ್ತಾವೇಜು ನೋಂದಣಿ ಸಮಯದಲ್ಲಿ ಪಕ್ಷಕಾರರ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲು, ವೆಲಿಡಿಟಿ ಆಫ್ ಕನ್ಸೆಂಟ್ ಬೇಸ್ಡ್ ಆಧಾರ್ ಅಥೆಂಟೇಷನ್ ಸರ್ವಿಸ್ ನ್ನು ದಿನಾಂಕ ೧೧-೦೩-೨೦೨೪ರ ಅಧಿಸೂಚನೆಯಲ್ಲಿ ಕರ್ನಾಟಕ ನೋಂದಣಿ ನಿಯಮಗಳು-೧೯೬೫ ರ ನಿಯಮ-೮೧ ಕ್ಕೆ ತಿದ್ದುಪಡಿ ತರುವ ಮೂಲಕ ಜಾರಿಗೆ ತರಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು, ಅಮಾಯಕರಿಗೆ ಅನ್ಯಾಯ ಆಗುವುದನ್ನು ತಪ್ಪಿಸಬೇಕೆಂಬುವುದೇ ನಮ್ಮ ಉದ್ದೇಶ. ಹೀಗಾಗಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಈ ವಿಷಯ ಕುರಿತಂತೆ ಸರ್ಕಾರದ ಗಮನಸೆಳೆಯಲಾಗುವುದು ಎಂದು ಯತ್ನಾಳ ತಿಳಿಸಿದ್ದಾರೆ.