ಶಿಕ್ಷಣ ಕೇವಲ ಪಠ್ಯ ಪುಸ್ತಕಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿಲ್ಲ: ಸಾಗರ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೩೧: ೨೧ನೇ ಶತಮಾನವು ತಂತ್ರಜ್ಞಾನ ಮತ್ತು ನವೀನತೆಯ ಕಾಲವಾಗಿದೆ. ಇಲ್ಲಿ ಶಿಕ್ಷಣವು ಕೇವಲ ಪಠ್ಯ ಪುಸ್ತಕಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಇತರ ಅಗತ್ಯ ಕೌಶಲ್ಯಗಳ ಅರ್ಥವನ್ನು ಕೂಡ ಒಳಗೊಂಡಿದೆ ಎಂದು ಶಿಕ್ಷಣ ತಜ್ಞ ಎ.ಎಚ್ ಸಾಗರ. ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಉದ್ಯೋಗ ಮತ್ತು ವೃತ್ತಿ ಸಮಾಲೋಚನಾ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವರ ಸಹಯೋಗದಲ್ಲಿ ಒಂದು ದಿನದ ಬ್ರೆöÊನ್ ಕಂಪ್ಯೂಟರ್ ಇಂಟರ್ಫೇಸ್ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಾರ್ಕಿಕ ತಾರ್ಕಿಕತೆ, ಸಾಫ್ಟ್ಸ್ಕಿಲ್ ಮತ್ತು ಇತರ ಅಗತ್ಯ ಕೌಶಲ್ಯಗಳು ಎಂಬ ವಿಷಯದ ಮೇಲೆ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದÀ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ತಂತ್ರಜ್ಞಾನವು ಡಿಜಿಟಲ್ ಪ್ರಪಂಚವನ್ನು ಇನ್ನಷ್ಟು ಬದಲಾಯಿಸುತ್ತಿದೆ. ಇಂತಹುದರಲ್ಲಿ, ಕಂಪ್ಯೂಟರ್ ಮತ್ತು ಬ್ರೆöÊನ್ ಇಂಟರ್ಫೇಸ್‌ಗಳನ್ನು ಬಳಸುವ ಮೂಲಕ, ಮಾನವ ಮತ್ತು ಯಂತ್ರದ ನಡುವಿನ ಸಂವಹನವನ್ನು ಸುಲಭಗೊಳಿಸಲು ಸಾಕಷ್ಟು ಹೊಸ ಅವಕಾಶಗಳು ಬಂದಿವೆ. ಈ ಹೊಸದಾದ ಪ್ರವರ್ತನೆಗಳ ಬಗ್ಗೆ ಸಾಫ್ಟ್ಸ್ಕಿಲ್ಸ್, ಸಮುದಾಯ ನಿರ್ವಹಣೆ, ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಯಶಸ್ವಿಯಾಗಲು, ಕೇವಲ ವಿಷಯ ತಿಳಿದರೆ ಸಾಕಾಗಲ್ಲ. ಬದಲಾಗಿ ಸಮಾನಾಂತರ ಕೌಶಲ್ಯಗಳ ಒದಗಿಸುತ್ತಿರುವ ಶಿಕ್ಷಣವನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ. ಎಂದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ, ಐಕ್ಯುಎಸಿ ನಿರ್ದೇಶಕÀ ಪ್ರೊ. ಪಿ.ಜಿ. ತಡಸದ ಹಾಗೂ ಡಾ. ಜಾಯ್ ಹೊಸಕೇರಿ ಉಪಸ್ಥಿತರಿದ್ದರು. ಡಾ. ಬಾಬು ಆರ್. ಎಲ್, ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶ್ರದ್ಧಾ ಮೇನಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.