ಕನ್ನಡದ ರಥಕ್ಕೆ ಭವ್ಯ ಸ್ವಾಗತ
ಲಕ್ಷ್ಮೇಶ್ವರ,ಸೆ.29:ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರಟಿರುವ ಕನ್ನಡದ ರಥವನ್ನು ನಿನ್ನೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆಯೇ ಪಂಪ ವೃತ್ತದಲ್ಲಿ ನೂರಾರು ಕನ್ನಡ ಅಭಿಮಾನಿಗಳು ಮತ್ತು ತಾಲೂಕ ಆಡಳಿತ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಪರವಾಗಿ ಶಾಸಕ ಡಾಕ್ಟರ್ ಚಂದ್ರ ಲಮಾಣಿ ಅವರು ಸ್ವಾಗತಿಸಿ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.
ನಂತರ ಕನ್ನಡದ ರಥಯಾತ್ರೆಯು ಆದಿ ಕವಿ ಪಂಪ ವೃತ್ತದ ಮುಖಾಂತರ ಹಳೆ ಬಸ್ ನಿಲ್ದಾಣ ಜಯದೇವ ವೃತ್ತ ಶಿಗ್ಲಿ ನಾಕಾ ಹೊಸ ಬಸ್ ನಿಲ್ದಾಣ ಗದಗನಾಕದವರೆಗೆ ಮೆರವಣಿಗೆ ಸಾಗಿತು ಮೆರವಣಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳು ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತ ಶೆಟ್ಟರ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಉಪಾಧ್ಯಕ್ಷ ಫೀರ್ ದೂಶ ಆಡೂರ ಪಿಎಸ್‍ಐ ಈರಣ್ಣ ರಿತ್ತಿ ತಾಲೂಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ್ ಮೆಡ್ಲೇರಿ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾಕ್ಟರ ಪರಶುರಾಮ ಬಾರ್ಕಿ ಡಾಕ್ಟರ ಹಯವದನ ಪೂರ್ಣಜಿ ಕರಾಟೆ ಸಿಜಿ ಹಿರೇಮಠ ಎಸ್‍ಎಫ್ ಆದಿ ಜೆ ಎಸ್ ರಾಮ ಶೆಟ್ಟರ ಎನ್‍ಎಸ್ ಚಾಕಲಬ್ಬಿ ಬಿ ಎಸ್ ಬಾಳೆಶ್ವರ ಮಠ ಎಸ್ ಎಫ್ ಕೊಡ್ಲಿ ಸೋಮಶೇಖರ್ ಕೆರ್ಮನಿ ಶೈಲಾ ಆದಿ ರತ್ನಾಕರ್ಕಿ ಲಲಿತಕ್ಕ ಕೆರಿಮನಿ ಎಸ್ ಎನ್ ಮಳಲಿ ಡಿ ಎಚ್ ಪಾಟೀಲ್ ಪುರಸಭೆ ಸದಸ್ಯರು ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.