ಕಮಲನಗರ ತಾಲೂಕಿನ ಹೆಮ್ಮೆಯ ಪುತ್ರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ
ಕಮಲನಗರ:ಸೆ.29: ತಾಲೂಕಿನ 6 ವರ್ಷದ ಪೆÇೀರಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಹೆಸರುಗಳನ್ನು ಕೇವಲ ಹತ್ತು ಸೆಕೆಂಡು 65 ಮಿಲಿ ಸೆಕೆಂಡನಲ್ಲಿ ಹೇಳುವ ಮೂಲಕ ಬೆಂಗಳೂರಿನಲ್ಲಿ ಈಚೆಗೆ ನಡೆಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಯೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಸಾಧಕರ ಪಟ್ಟಿಗೆ ಸೇರಿದ್ದಾಳೆ.
ತಾಯಿ ಅಶ್ವಿನಿ ಹಾಗೂ ತಂದೆ ಶೈಲೇಶ್
ದಂಪತಿಯ ಪುತ್ರಿ ತೋಶ್ನಿ ಸಧ್ಯ ಯು ಕೆ ಜಿ ಓದುತ್ತಿದ್ದಾಳೆ.
ಶೈಲೇಶ್ ಅವರು ಬೆಂಗಳೂರಿನಲ್ಲಿಇಕಾಮರ್ಸ್ ಬ್ರಾಂಡ್ ಮ್ಯಾನೇಜರ್ ಆಗಿ ಬೆಂಗಳೂರಿನ ಮಾರತಹಳ್ಳಿಯಲ್ಲಿ ಉದ್ಯೋಗದಲ್ಲಿದ್ದಾರೆ
ಈ ಹಿಂದೆ 17 ಸೆಕೆಂಡುಗಳಲ್ಲಿ ರಾಜ್ಯದ ಜಿಲ್ಲೆಯ ಹೆಸರುಗಳು ಹೇಳಿದ ಧ್ವನಿ ಮಾಲ್ಬಾಡ್ ಎಂಬ ಬಾಲಕಿಯ ಹೆಸರಿನಲ್ಲಿದ ದಾಖಲೆಯನ್ನು ಮುರಿಯುವ ಮೂಲಕ ತೋಶ್ನಿ ತನ್ನ ಪ್ರತಿಭೆ ಮೆರೆದಿದ್ದಾಳೆ.
ತಾಲೂಕಿನ ತಸಿಲ್ದಾರ್ ಅಮಿತ್ ಕುಲಕರ್ಣಿ ತಾಲೂಕ್ ಪಂಚಾಯತ್ ಮಾಣಿಕ ರಾವ್ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲಾ ಸಜ್ಜನ್ ಶೆಟ್ಟಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಾಂತ್ ಮಡಪತಿ ಶಾಸ್ತ್ರೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಅಧ್ಯಕ್ಷರು ಡಾಕ್ಟರ್ ಅಜಿತ್ ಕುಮಾರ್ ಶಾಸ್ತ್ರಿ ಭಗೀರಥಿ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಮನೋಜ್ ಕುಮಾರ್ ಹಿರೇಮಠ್ ಕರ್ನಾಟಕ ಸಾಹಿತ್ಯ ಪರಿಷತ್ತು ಕಮಲನಗರ ಅಧ್ಯಕ್ಷರಾದ ಸಂಗಮೇಶ್ವರ ಎಸ್ ಮುರ್ಕೆ ಸೇರಿ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದರು.ಸಾಧನೆಯ ಪ್ರಯುಕ್ತ ಹೇಳಿಕೆಗಳು
ಕಮಲನಗರ ಪಟ್ಟಣದ ನಿವಾಸಿ ಶೈಲೇಶ ಮತ್ತು ಅಶ್ವಿನಿ ದಂಪತಿ ಪುತ್ರಿ ತೋಶ್ನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಗೆ ಸೇರಿದ್ದು ಅತ್ಯಂತ ಹರ್ಷದ ಸಂಗತಿಯಾಗಿದ್ದು, ಬಾಲಕಿಯ ಸಾಧನೆಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಗುವುದು.
-ಅಮಿತಕುಮಾರ ಕುಲಕರ್ಣಿ, ತಹಸೀಲ್ದಾರ್ ಕಮಲನಗರ.
ಕಮಲನಗರ ಪಟ್ಟಣದ ಪ್ರತಿಭಾವಂತ ಹೆಮ್ಮೆಯ ಪುತ್ರಿ ತೋಶ್ನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಗೆ ಸೇರಿದ್ದು ನಮಗೆಲ್ಲರಿಗೂ ಸಂತೋಷ ತಂದಿದೆ. ಬಾಲಕಿಯ ಸಾಧನೆಗೆ ಶಾಸತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವ ದಿನದಂದು ಸನ್ಮಾನಿಸಿ ಗೌರವಿಸಲಾಗುವುದು.