ಜಾನಪದ ಪುರಸ್ಕಾರ, ಪ್ರಶಸ್ತಿ ಪ್ರದಾನ
ಧಾರವಾಡ,ಸೆ.29:ಜನಪದರಜೀವನದ ಸಮಸ್ತ ನೆಲೆಗಳು ಜಾನಪದ ಸಾಹಿತ್ಯದಲ್ಲಿದೆ. ನಮ್ಮ ಬದುಕನ್ನುತಿದ್ದಿ ಸಂಸ್ಕಾರಗೋಳಿಸುವ ಅದಮ್ಯತೆಅದರದಲ್ಲಿದೆಎಂದುಖ್ಯಾತ ಮನೋಆರೋಗ್ಯ ವೈದ್ಯರಾದಡಾ.ಆನಂದ ಪಾಂಡುರಂಗಿಅಭಿಪ್ರಾಯ ಪಟ್ಟರು.
ಅವರು ಕ.ವಿ.ವ ಸಂಘವು, ದಿ.ಜಯಶ್ರೀಗುತ್ತಲ ದತ್ತಿ ಅಂಗವಾಗಿ ಆಯೋಜಿಸಿದ್ದ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2024 ಪ್ರಶಸ್ತಿ ಪ್ರದಾನ ಸಮಾರಂಭದಅತಿಥಿಯಾಗಿ ಮಾತನಾಡುತ್ತಿದ್ದರು.
ನಮ್ಮ ಹಳ್ಳಿಯ ಜನರು ನಿರಕ್ಷರಿಗಳಾದರೂ ಎಲ್ಲರಿಗೂ ತಿಳಿಯುವಂತೆ ಆಡು ಭಾಷೆಯಲ್ಲಿಜಾನಪದ ಹಾಡುಕಟ್ಟಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು.ಜಾನಪದ ಹಾಡುಗಳು ಹಾಗೂ ಸಂಗೀತಎರಡೂ ಮನಸ್ಸಿನ ಬೇಸರ, ಜಡತ್ವದೂರು ಮಾಡಿ ಮನಸ್ಸಿಗೆ ಸಮಾಧಾನ, ಆನಂದ, ಏಕಾಗ್ರತೆಉಂಟು ಮಾಡುತ್ತವೆ. ಈ ಹಾಡುಗಳು ಜನಸಾಮಾನ್ಯರಿಗೂಅರ್ಥವಾಗುತ್ತವೆಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಪಂಡಿತ.ಎಂ.ವೆಂಕಟೇಶಕುಮಾರ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಮೂಲ ಜಾನಪದ ಹಾಡುಗಳನ್ನು ಸಿನೇಮಾ ದಾಟಿಯಲ್ಲಿ ಹಾಡುತ್ತಿರುವುದು ಸಲ್ಲದು.ಇಂತಹ ಹಾಡುಗಳು ನಮ್ಮಜನಪದ ಬದುಕಿಗೆಧಕ್ಕೆಉಂಟು ಮಾಡುತ್ತವೆ. ಮೂಲ ಜಾನಪದ ಪರಂಪರೆಯನ್ನುಅರ್ಥ ಮಾಡಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ದಿ.ಜಯಶ್ರೀಗುತ್ತಲ ಓರ್ವ ಶ್ರೇಷ್ಠ ಸಂಗೀತಗಾರರು. ಈ ಕಾರ್ಯಕ್ರಮಜಾನಪದ ಹಬ್ಬದಂತೆ ವಿಜ್ರಂಭಿಸುತ್ತಿದೆ.ಜಾನಪದತಾಯಂದಿರು ಮೂಲ ಜಾನಪದದಾಟಿಯಲ್ಲಿ ಹಾಡುವದನ್ನುತಮ್ಮ ಮಕ್ಕಳಿಗೆ ಕಲಿಸಬೇಕು. ನಮ್ಮ ಹಿರಿಯರು ನಮಗಾಗಿ ಬಿಟ್ಟು ಹೋದ ಬಹು ದೊಡ್ಡಜಾನಪದ ಆಸ್ತಿ ಉಳಿಸಿ, ಬೆಳಿಸಬೇಕಿದೆ ಎಂದರು.
ವೇದಿಕೆಯಲ್ಲಿಡಾ.ಕೃತಿಕಾ ಸತ್ಯಬೋಧಗುತ್ತಲ, ಸರೋಜಾರಾವ್, ಡಾ.ಮಲ್ಲಿಕಾರ್ಜುನತರ್ಲಘಟ್ಟ ನಿರ್ಣಾಯಕರಾದಡಾ.ಶ್ರೀಧರ ಕುಲಕರ್ಣಿ ಹಾಗೂ ಡಾ. ಪ್ರಕಾಶ ಮಲ್ಲಿಗವಾಡ ಮುಂತಾದವರಿದ್ದರು.ದತ್ತಿದಾನಿ ಎಸ್.ಬಿ.ಗುತ್ತಲ ದತ್ತಿಆಶಯಕುರಿತು ಮಾತನಾಡಿದರು. 30ಕ್ಕೂ ಹೆಚ್ಚು ಮಹಿಳಾ ಮಂಡಳಗಳು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು.ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರಮಾಣ ಪತ್ರ ನೀಡಲಾಯಿತು.
ಬೈಲಹೊಂಗಲದ ವೇಣು ಮಾಧವ ಭಜನಾ ಮಂಡಳ ಪ್ರಥಮ ಸ್ಥಾನ ಪಡೆದು `ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2024′ ತನ್ನ ಮುಡಿಗೇರಿಸಿಕೊಂಡಿತು. ಹುಬ್ಬಳ್ಳಿಯ ಶ್ರೀ ಗೌರಿ ಮಹಿಳಾ ಮಂಡಳ ದ್ವಿತೀಯ ಸ್ಥಾನ ಪಡೆದರೆ, ಧಾರವಾಡದ ನಂದಿಕೋಲು ಮಹಿಳಾ ಮಂಡಳ ಮತ್ತು ಮಂದಹಾಸ ಭಜನಾ ಮಂಡಳÀ ತೃತೀಯ ಸ್ಥಾನ ಹಂಚಿಕೊಂಡರು. ಸಮಾಧಾನಕರ ಬಹುಮಾನವನ್ನುಧಾರವಾಡದ ವನಸಿರಿ ಮಹಿಳಾ ಮಂಡಳ, ಹುಬ್ಬಳ್ಳಿಯ ನೇತ್ರಾವತಿ ಮಹಿಳಾ ಮಂಡಳ, ಅಳ್ನಾವರದ ವೀರಭದ್ರೇಶ್ವರ ಮಹಿಳಾ ಮಂಡಳ ಹಾಗೂ ಮಾಳಮಡ್ಡಿಯ ಗೀತಾ ಭಜನಾ ಮಂಡಳಲ್ಲಿ ಹಂಚಲಾಯಿತು.
ಶಂಕರ ಹಲಗತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ವೀರಣ್ಣಒಡ್ಡೀನ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಆರ್.ಬಿ. ವಾಡಪ್ಪಿ, ಡಿ.ಎಂ.ಸಿಂದಗಿ, ಪ್ರೊ. ಶ್ರೀಕಾಂತ ಮಾಳಾಪೂರ, ಶ್ರೀಧರ ಗಾಂವಕರ, ಜಿ.ಎಲ್.ಪಾಟೀಲ, ಜಿ.ಎಸ್.ತೊರಗಲ್ಲಮಠ, ಎಚ್. ತಿರುಮಲೇಶ, ಕುಮಾರ ವೈದ್ಯ, ಭಾರ್ಗವಿ ಕುಲಕರ್ಣಿ, ಎಂ.ಎಂ.ಚಿಕ್ಕಮಠ, ಬಸವರಾಜಕ್ವಾಟಿ, ಅಶೋಕ ಪಟಾತ, ಶಾಮ ಕುಲಕರ್ಣಿ, ಚಂದ್ರ್ರಶೇಖರಅಮ್ಮಿನಗಡ, ಎಸ್.ಎಂ.ಅಂಗಡಿ, ಎಸ್.ಕೆ.ಕುಂದರಗಿ ಸೇರಿದಂತೆ ಮುಂತಾದವರಿದ್ದರು.