ಕಲಾವಿದರಿಗೆ ವೇದಿಕೆ ಮುಖ್ಯ
ಧಾರವಾಡ,ಸೆ.29:ಕಲಾವಿದರಿಗೆ ವೇದಿಕೆ ಬಹಳ ಮುಖ್ಯ. ಇಲ್ಲವಾದರೆ ಕಲೆಗಳು ಕಳೆದುಹೋಗುತ್ತವೆ. ಸಂಗೀತ, ಸಾಹಿತ್ಯಎಂಬುದು ಮೊದಲು ವ್ಯವಹಾರಿಕವಾಗಿರಲಿಲ್ಲ. ಅಹೋರಾತ್ರಿಜರುಗುವ ಶಾಸ್ತ್ರೀಯ ಸಂಗೀತವನ್ನು ಸಂಗೀತಾಸಕ್ತರು ಬೆಳೆತನಕ ಕುಳಿತು ಕೇಳುತ್ತಿದ್ದ ದಿನಗಳು ಇಂದುಇಲ್ಲದಾಗಿವೆಎಂದು ಶಾಂತರಾಮ್ ಹೆಗಡೆಅವರುಅಭಿಪ್ರಾಯ ಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘ ಕಲಾಮಂಟಪ ಆಯೋಜಿಸಿದ್ದ ನಿಜಗುಣ ಮಂಗಿಯವರ ಶಾಸ್ತ್ರೀಯ ಹಾಗೂ ಸುಗಮ ಸಂಗೀತಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಮೊದಲುಆಸಕ್ತರ ಮನೆಯಲ್ಲಿಅಥವಾ ಸಂಸ್ಥೆಯಲ್ಲೂ ಬೈಠಕಗಳಾಗುತ್ತಿದ್ದವು.ಕಲಾವಿದರಿಗಾಗಿಕಲಾವಿದರಿಂದ ಹುಟ್ಟಿಕೊಂಡ ಸಂಸ್ಥೆಗಳು ಇದ್ದವು.ಬೆಳತನಕ ಶಾಸ್ತ್ರೀಯ ಸಂಗೀತ ಕೇಳಲು ಜನಆಸಕ್ತಿಯಿಂದ ಬರುತ್ತಿದ್ದರು, ಕೇಳುತ್ತಿದ್ದರು.ಈಗ ಕಲಿಯುವಕಲಾವಿದರು ಜಾಸ್ತಿ ಇದ್ದಾರೆ.ಆದರೆಅವರಿಗೆ ವೇದಿಕೆಗಳು ಬೇಕಾಗಿದೆ.ಸಂಘ ಈ ದಿಶೆಯಲ್ಲಿಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಹಿರಿಯಕಲಾವಿದರನ್ನು, ಯುವಕಲಾವಿದರನ್ನು ಕರೆಸಿ ಅವರಿಂದ ಕಾರ್ಯಕ್ರಮಗಳನ್ನು ಮಾಡಿಸುತ್ತಿರುವುದು ಶ್ಲಾಘನೀಯ.80ರ ದಶಕದಲ್ಲಿ ಮೊಟ್ಟಮೊದಲ ಶಾಸ್ತ್ರೀಯ ಸಂಗೀತಕಾರ್ಯಕ್ರಮವನ್ನು ವಿದ್ಯಾಲಯದಿಂದತಾವು ಮಾಡಿದ್ದನ್ನು ನೆನಪಿಸಿಕೊಂಡರು.ಈಗಲೂ ಸಂಗೀತ ಸೆಕ್ಟರ್‍ಗೆಕೊರತೆಇಲ್ಲ, ಸಂಗೀತಕಲಾವಿದರಕೊರತೆಇಲ್ಲ, ವೇದಿಕೆಗಳು ನಿರ್ಮಾಣವಾಗಬೇಕಿದೆಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹನುಮಂತ ಬುರ್ಲಿ ಮಾತನಾಡಿಕಲಾವಿದನಿಗೆತುಡಿತವಿರಬೇಕು, ಅಂದರೆ ಮಾತ್ರ ಸಾಧನೆ ಸಾಧ್ಯ.ಸಂಗೀತಎಂಬುದುಎಲ್ಲರಿಗೂಒಲಿಯುವುದಲ್ಲ ಸಾಧನೆಯಿಂದ ಮಾತ್ರ ಸರಸ್ವತಿ ಒಲಿಯುತ್ತಾಳೆ.ತಮ್ಮ ಶಿಷ್ಯ ನಿಜಗುಣ ಮಂಗಿಯವರು ಒಳ್ಳೆಯ ಯುವ ಸಂಗೀತಗಾರರಾಗಿದ್ದು, ಪರಿಶ್ರಮದಿಂದ ಸಾಧನೆ ಮಾಡುತ್ತಿದ್ದಾರೆಅವರಿಗೆಯಶಸ್ಸು ಸಿಗಲಿ ಎಂದರು.ಕರ್ನಾಟಕ ವಿದ್ಯಾವರ್ಧಕ ಸಂಘ ಇಂತಹ ಕಾರ್ಯಕ್ರಮಗಳನ್ನು ಕಲಾಮಂಟಪದಿಂದ ಆಯೋಜಿಸಿ ಕಲಾವಿದರನ್ನು ಪೆÇ್ರೀತ್ಸಾಹಿಸುತ್ತಿರುವುದುಕಲಾವಿದರಿಗೊಂದು ಸಂತಸದ ಸಂಗತಿಎಂದರು.ತಾವುಕೂಡಇದೇ ವೇದಿಕೆಯಲ್ಲಿ ದಶಕಗಳ ಹಿಂದೆಕಾರ್ಯಕ್ರಮ ನೀಡಿರುವುದನ್ನು ಸ್ಮರಿಸಿಕೊಂಡರು.
ನಿಜಗುಣ ಮಂಗಿಯವರು ಶಾಸ್ತ್ರೀಯ ಸಂಗೀತದೊಂದಿಗೆ, ವಚನ, ದಾಸರ ಪದ, ಶರೀಫರ ತತ್ವಪದಗಳನ್ನು ಹಾಡಿಎಲ್ಲರ ಮೆಚ್ಚುಗೆಗೆ ಪಾತ್ರರಾದರು.ವೇದಿಕೆ ಮೇಲೆ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉಪಸ್ಥಿತರಿದ್ದರು.
ವಿಷಯಾಜೇವೂರ ಸ್ವಾಗತಿಸಿದರು.ಕಲಾ ಮಂಪದ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೇಘಾ ಹುಕ್ಕೇರಿ ನಿರೂಪಿಸಿದರು, ಖೈರುನ್ನಿಸಾ ಪ್ರಾರ್ಥಿಸಿದರು.ಸುನಿತಾ ವಾಸರದ ವಂದಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣಒಡ್ಡೀನ, ಡಾ.ಮಹೇಶ ಹೊರಕೇರಿ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ನಂದಾ ಗುಳೇದಗುಡ್ಡ, ಗೀತಾಕುಲಕರ್ಣಿ, ನೀಲಾ ಸಿಗ್ಲಿ, ಸುಜಾತಗುರವ, ಪುಷ್ಪಾ ಹಿರೇಮಠ, ಇಂದಿರಾ ಸುನಿತಾ, ಸುನಂದ ಹೊಸಮನಿ, ಪಂಡಿತ ಅಶೋಕ ಹುಗ್ಗಣ್ಣನವರ, ಸವಿತಾ ಮಂಗಿ ಮುಂತಾದವರುಇದ್ದರು.
