ಸಂಘಟನೆಗಳು ಸಮಾಜದ ಅಂಕು ಡೊಂಕು ತಿದ್ದುವ ಕಾರ್ಯ ಮಾಡಬೇಕು
ಮುದ್ಧೇಬಿಹಾಳ :ಜು.೩೧: ಸಂಘಟನೆಗಳು ನಿಂತ ನೀರಾಗದೇ ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದು ಶಕ್ತಿ ಕೇಂದ್ರವಾಗಬೇಕಿದೆ, ಸಂಘಟನೆಗಳ ಹೆಸರಿನಲ್ಲಿ ಸಮಾಜಕ್ಕೆ ದ್ರೋಹ ಬಗೆಯುವದನ್ನು ಬಿಟ್ಟು ಸಮ ಸಮಾಜದತ್ತ ಹೆಜ್ಜೆ ಹಾಕುವದು ಸೂಕ್ತ ಎಂದು ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕಾ ಅಧ್ಯಕ್ಷ ಮುತ್ತು ಟಕ್ಕಳಕಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕಾ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಯಾವುದೇ ಸ್ಥಳದಲ್ಲಿ ಅನ್ಯಾಯ, ಅಕ್ರಮ ನಡೆದಿದೆ ಎಂದು ನಮ್ಮ ಗಮನಕ್ಕೆ ಬಂದರೆ ಅಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸುವದು ಮಾತ್ರವಲ್ಲದೆ ಅನ್ಯಾಯಕ್ಕೋಳಗಾದವರರಿಗೆ ನ್ಯಾಯ ಕೋಡಿಸುವಲ್ಲಿ ನಮ್ಮ ಪ್ರಯತ್ನ ಇರಬೇಕು,ಅಂತಹ ಕೆಲಸವನ್ನು ನಮ್ಮ ಸಂಘಟನೆ ಇಂದಿನಿAದಲೇ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ನಂತರ ಅಹಿಂದ ಮುಖಂಡ ಸಂಘದ ಉಪಾಧ್ಯಕ್ಷರಾದ ನಾಗರಾಜ ಹೀರೆಕುರಬರ ಮಾತನಾಡಿ ಈ ಹಿಂದೆ ನಮ ಸಮಾಜದಲ್ಲಿ ಹಲವಾರು ಸಂಘಟನೆಗಳು ಅಸ್ಥೀತ್ವಕ್ಕೆ ಬಂದು ತಮ್ಮ ಸ್ಥೀರತೆಯನ್ನು ಕಳೆದುಕೊಂಡಿರುವದನ್ನು ನಾವುಗಳು ಎಲ್ಲರೂ ನೋಡಿದ್ದೇವೆ, ಈ ನಮ್ಮ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಎಂಬ ಸಂಘಟನೆ ನಾಡಿನಾಧ್ಯಂತ ತಮ್ಮದೇಯಾದ ಚಾಪು ಮೂಡಿಸಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಯುವಕರಿಗೆ ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಬೀಮಪ್ಪ ರಕ್ಕಸಗಿ, ಅನೀಲ ವಾಲಿಕಾರ,ರಾಜು ವಡ್ಡೋಡಗಿ, ಜುಮ್ಮಣ್ಣ ಹೊಕ್ರಾಣಿ,ಮಣಿಕಂಠ ಅಮರೋಡಗಿ,ಮಾಳಿಂಗರಾಯ ಯರಝೇರಿ,ಶಿವರಾಜ ತಿಂಗಳ,ಸಾಬಣ್ಣ ಹೀರೆಕುರಬರ,ಶಿವಾನಂದ ವಣಿಕಿಹಾಳ, ಮುತ್ತು ನಾಡಗೌಡ,ಮುತ್ತು ಬೀರಗೋಂಡ,ಯಲ್ಲಪ್ಪ ವಗ್ಗರ, ಯಲ್ಲಾಲಿಂಗ ವಾಲಿಕಾರ,ಬೇಳೆನಸಿದ್ದ ಒಡೆಯರ,ಮೌನೇಶ ಬಾಗೇವಾಡಿ, ಸಾಬಣ್ಣ ಹೊಕ್ರಾಣಿ,ಹಣಮಂತ ಪೂಜಾರಿ,ಮಂಜುನಾಥ ವಾಲಿಕಾರ,ಬಾಳಪ್ಪ ವಾಲಿಕಾರ, ದೇವಪ್ಪ ವಾಲಿಕಾರ ಇನ್ನೂ ಅನೇಕರನ್ನು ತಾಲೂಕಾ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು.