ಅಕ್ರಮ ಪಡಿತರ ಸಂಗ್ರಹದ ಅಡ್ಡೆ ಮೇಲೆ ದಾಳಿ
ಕಲಬುರಗಿ ಜು.30: ಆಳಂದ ಪಟ್ಟಣದ ಹೊರವಲಯದ ಎ ವಿ ಪಾಟೀಲ ಪದವಿ ಮಹಾವಿದ್ಯಾಲಯದ ಹತ್ತಿರ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಸರ್ಕಾರದ ವಿವಿಧ ಯೋಜನೆಗಳ ಪಡಿತರ ಧಾನ್ಯದ ದಾಸ್ತಾನಿನ ಮೇಲೆ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ದಾಳಿ ಮಾಡಿ ಪೋಲಿಸರಿಗೆ ಮಾಹಿತಿ ನೀಡಿದರು.
ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿರುವ ದಾಸ್ತಾನು ಸರ್ಕಾರದ ವಿವಿಧ ಯೋಜನೆಗಳಾದ ಬಿಸಿಯೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಕ್ಷೀರಭಾಗ್ಯ ಯೋಜನೆಗಳಿಗೆ ಸಂಬAಧಿಸಿದ ಆಹಾರ ಧಾನ್ಯವಾಗಿದೆ.
ಆಳಂದ ತಾಲೂಕಿನಲ್ಲಿ ನಿರಂತರವಾಗಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ ಆದರೆ ಸಂಬAಧಪಟ್ಟ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದ ಈ ರೀತಿ ಅಕ್ರಮ ದಂಧೆ ಮಾಡುವವರು ಅಂಜಿಕೆ ಇಲ್ಲದೇ ಬಡವರಿಗೆ ಸೇರಬೇಕಾದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊAಡು ಮಾರಾಟ ಮಾಡುತ್ತಿದ್ದಾರೆ.
ಆಹಾರ ಇಲಾಖೆಯ ಮುಜಾಹೀದ್, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಶ್ರೀಕಾಂತ ಮೆಂಗಜೀ ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ಆಳಂದ ಠಾಣೆಯ ಎಸ್‌ಐ ಮಹಾದೇವ ಪಂಚಮುಖಿ, ಪಿಎಸ್‌ಐ ಭೀಮರಾಯ ಅಂಕಲಗಿ ಪರಿಶೀಲನೆ ನಡೆಸಿದರು.