ನೂತನ ಮೇಯರ್ ಹಾಗೂ‌‌ ಉಪಮೇಯರ್ ಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ
ಕಲಬುರಗಿ ಜು.30: ಕಲಬುರಗಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾದ ಯಲ್ಲಪ್ಪ ನಾಯ್ಕೋಡಿ ಅವರಿಗೆ ಮತ್ತು ಉಪಮೇಯರ್ ಆಗಿ ಆಯ್ಕೆಯಾದ ಹೀನಾ ಬೇಗಂ ಅವರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು ಈ ಹಿಂದೆ ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಮಹಾನಗರದಲ್ಲಿ ಯಾವುದೇ ನೂತನ ಯೋಜನೆಗಳು ಜಾರಿಯಾಗುತ್ತಿರಲಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿರಲಿಲ್ಲ. ಕೇವಲ ಧರ್ಮದ ರಾಜಕಾರಣ ನಡೆಸುತ್ತ ಕಾಲಹರಣ ಮಾಡುತ್ತಿದ್ದರು. ಈಗ ಇದೆಲ್ಲವುದಕ್ಕೂ ಮುಕ್ತಿ ದೊರೆತಿದೆ ಎಂದು ಅವರು ಹೇಳಿದ್ದಾರೆ.
” ಇದೀಗ ಜನಪರ ಕಾಳಜಿವುಳ್ಳ ಕಾಂಗ್ರೆಸ್ ಪಕ್ಷವು ಮಹಾನಗರ ಪಾಲಿಕೆಯ ಗದ್ದುಗೆಯನ್ನು ಹಿಡಿದಿರುವುದು ನಿಜಕ್ಕೂ ಸಂತಸ ತಂದಿದೆ. ನೂತನ ಮೇಯರ್ ಅವರ ನೇತೃತ್ವದಲ್ಲಿ ನಗರವು ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಹೊಂದಲಿ. ಸರ್ಕಾರದ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡುತ್ತೇನೆ.
ಈ ಗೆಲುವಿಗಾಗಿ ಕೈ ಜೋಡಿಸಿದ ಎಲ್ಲಾ ಸದಸ್ಯರಿಗೆ ಜನಪ್ರತಿನಿಧಿಗಳಿಗೆ ಧನ್ಯವಾದಗಳು” ಎಂದು ಖರ್ಗೆ ಹೇಳಿದ್ದಾರೆ.