ಪುನೀತ್ ಕೆರೆಹಳ್ಳಿ ಬಂಧನ, ದೌರ್ಜನ್ಯ : ಎಸಿಪಿ ಚಂದನಕುಮಾರ್, ಆರೋಪಿ ಅಬ್ದುಲ್ ರಜಾಕ್ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿ ಜು.30: ರಾಷ್ಟç ರಕ್ಷಣಾ ಪಡೆ ಸಂಸ್ಥಾಪಕ ಅಧ್ಯಕ್ಷರಾದ ಪುನೀತ ಕೆರೆಹಳ್ಳಿ ಅವರು ಕಳೆದ ಅನೇಕ ವರ್ಷಗಳಿಂದ ರಾಷ್ಟç ರಕ್ಷಣಾ ಪಡೆಯ ಅಡಿಯಲ್ಲಿ ಅನೇಕ ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಅವರಿಗೆ ಬಂಧಿಸಿ, ದೌರ್ಜನ್ಯ ಎಸಗಿದ್ದು ಖಂಡನೀಯವಾಗಿದೆ. ಆದ್ದರಿಂದ ಎಸಿಪಿ ಚಂದನಕುಮಾರ್ ಹಾಗೂ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಷ್ಟç ರಕ್ಷಣಾ ಪಡೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ 26ರಂದುಸAಜೆ ಸರಿಯಾಗಿ 06 ಗಂಟೆಗೆ ಪುನೀತ್ ಕೆರೆಹಳ್ಳಿ ಅವರ ಹಾಗೂ ಅವರ ತಂಡ ಅಕ್ರಮವಾಗಿ ರಾಜಸ್ಥಾನದಿಂದ ಬೆಂಗಳೂರು ರೈಲು ನಿಲ್ದಾಣದಲ್ಲಿ ಮಾಂಸ ಸರಬರಾಜು ಮಾಡುತ್ತಿರುವ ಬಗ್ಗೆ ಪೊಲೀಸರ ಗಮನಕ್ಕೂ ಮತ್ತು ಆರೋಗ್ಯ ಇಲಾಖೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳ ಗಮನಕ್ಕೆ ತಂದರು. ರಾಜಸ್ಥಾನದಿಂದ ಬೆಂಗಳೂರಿಗೆ ಅಕ್ರಮವಾಗಿ ಟನ್‌ಗಟ್ಟಲೆ ಅತ್ಯಂತ ಕಳಪೆ ಮಟ್ಟದ ಮಾಂಸವನ್ನು ಸರಬರಾಜು ಮಾಡಲಾಗುತ್ತಿದ್ದು, ಜನರ ಆರೋಗ್ಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದ್ದು, ಇದರಲ್ಲಿ ನಾಯಿಯ ಮಾಂಸವನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಆರು ತಿಂಗಳ ಹಿಂದೆ ಬೆಂಗಳೂರಿನ ಮಾಂಸದ ವ್ಯಾಪಾರಿಗಳು ದೂರು ನೀಡಲಾಗಿದ್ದು, ಆದರೂ ಸಹ ಸರ್ಕಾರವು ಸಂಬAಧಿಸಿದ ತಪ್ಪಿತಸ್ಥರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಆದಾಗ್ಯೂ, ಪುನೀರ್ ಕೆರೆಹಳ್ಳಿ ಹಾಗೂ ಅವರ ತಂಡ ಅಕ್ರಮ ಮಾಂಸ ಸಮೇತವಾಗಿ ಇದನ್ನು ಪೊಲೀಸರ ಗಮನಕ್ಕೆ ತಂದು ಆ ಅಕ್ರಮದ ಬಗ್ಗೆ ಕ್ರಮ ಜರೂಗಿಸಲು ಒತ್ತಾಯ ಮಾಡಿದರು. ಸಂಗೋಳಿ ರಾಯಣ್ಣರ ನಿಲ್ದಾಣದ ಪ್ಲಾಟ್ ಫಾರಂ ನಂ.2 ಬಳಿ ಸ್ಥಳದಲ್ಲಿ ಅಕ್ರಮವಾಗಿ ಮಾಂಸದ ಬಾಕ್ಸ್ಗಳು ಸರಿ ಸುಮಾರು ನಾಲ್ಕು ಸಾವಿರ ಕೆಜಿ ಇಡಲಾಗಿತ್ತು. ಅಲ್ಲಿ ಕೊಳೆತ ಮಾಂಸದ ಗೊಬ್ಬು ವಾಸನೆ ಬುರುತ್ತಿದ್ದು, ಅವಧಿ ಮುಗಿದ ಮಾಂಸವಾಗಿದೆ. ತಿನ್ನಲು ಯೋಗ್ಯವಾಗಿಲ್ಲದ ಕಾರಣಕ್ಕೆ ಪುನೀತ್ ಕೆರೆಹಳ್ಳಿ ಅವರನ್ನು ರಾತ್ರೋರಾತ್ರಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಂದನವನ್ನು ಮಾಡಿದ್ದರೂ. ಅವರ ಮೇಲೆ ಅಮಾನುಷವಾಗಿ ಎಸಿಪಿ ಚಂದನಕುಮಾರ್ ಅವರು ಬಂಧಿಸಿ ದೌರ್ಜನ್ಯ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಅವರ ಬಟ್ಟೆಯನ್ನು ತೆಗೆಯಿಸಿ ಅರೇ ಬೆತ್ತಲೆ ಮಾಡಿ ಅವರ ವಿಡಿಯೋವನ್ನು ಮಾಡಿ ನಿನ್ನ ನಾಟಕ ಜಾಸ್ತಿ ಆಗಿದೆ ಇನ್ನು ಮುಂದೆ ನಡೆಯುವುದಿಲ್ಲ. ಜಾಸ್ತಿ ನಾಟಕ ಮಾಡಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ ಎಂದು ಅವರಿಗೆ ಬೆದರಿಕೆ ಹಾಕಿ ಅಪಮಾನ ಮಾಡಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಅಷ್ಟೆ ಅಲ್ಲದೇ ಅವರ ಎಡಗಾಲಿನ ಮೇಲೆ ಅಮಾನುಷವಾಗಿ ಎಸಿಪಿ ಚಂದನ್ ಹಾಗೂ ಪೊಲೀಸರು ಬರ್ಬರವಾಗಿ ಅವರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ. ಅವರ ಗಡ್ಡವನ್ನು ಹಿಡಿದಾಡಿದ್ದಾರೆ. ಹಾಗೂ ಅವರನ್ನು ಅಮಾನವಿಕವಾಗಿ ಥಳಿಸಿದ್ದಾರೆ, ಮತ್ತು ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದರೆ ಅಬ್ದುಲ್ ರಜಾಕ್ ಎನ್ನುವ ಮುಸ್ಲಿಂ ಮುಖಂಡ ಸರ್ಕಾರಿ ಅಧಿಕಾರಿಗಳನ್ನು ಕರ್ತವ್ಯ ಮಾಡಲು ಅಡ್ಡಿಪಡಿಸಿದರೂ ಮೀನು ಎಂದು ಎಂದು ಸುಳ್ಳು ಹೇಳಿ ಮಾಂಸ ಮಾರಾಟ ಮಾಡುವ ಅಪರಾಧದ ವಿರುದ್ಧ ಯಾವುದೇ ಕ್ರಮ ಜರೂಗಿಸಲಿಲ್ಲ. ಇದು ಅನ್ಯಾಯವಾಗಿದೆ ಎಂದು ಅವರು ಕಿಡಿ ಕಾರಿದರು.
ಪುನೀತ್ ಕೆರೆಹಳ್ಳಿ ಅವರ ದೌರ್ಜನ್ಯ ಹಿಂದು ಮಾನವ ಹಕ್ಕುಗಳ ಉಲಂಘನೆಯಾಗಿದೆ. ಹಾಗಾಗಿ ತಪ್ಪಿತಸ್ಥ ಪೊಲೀಸ ಅಧಿಕಾರಿಗಳಾದ ಎಸಿಪಿ ಚಂದನಕುಮಾರ್ ಅವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು. ಹಾಗೂ ಮಾಂಸದ ದಂದೆ ಮಾಡುವ ಅಬ್ದುಲ್ ರಜಾಕನ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅಮರಾವತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸತ್ಯಪ್ರಮೋದ್ ನವಲಿ, ಗಂಗಾಧರ್ ಹಲಬಾ, ವಿಠಲ್ ಕುಲಕರ್ಣಿ, ಸಂಗಮೇಶ್ವರ್ ದೇವರನಾವದಗಿ, ನಾರಾಯಣ್ ಜಾಗೀರದಾರ್, ಅಂಬರೀಷ್ ಪಾಟೀಲ್, ಮಲ್ಲಿಕಾರ್ಜುನ್ ಬಿರಾದಾರ್, ಸಂತೋಷ್ ಎನ್. ಕೆಲೆಗೆಂವಕರ್, ಮಹೇಶ್ ಗೊಬ್ಬೂರ್, ರಾಕೇಶ್ ಜಮಾದಾರ್, ಅಂಬಾರಾಯ್ ಕಂಬಾರ್, ಮಾಲಾ ಕಣ್ಣಿ ಮುಂತಾದವರು ಪಾಲ್ಗೊಂಡಿದ್ದರು.