ಆರೋಗ್ಯ ಭಾಗ್ಯಕ್ಕಾಗಿ ಸಾವಯವ ಆಹಾರ ಪದಾರ್ಥ ಬಳಕೆಗೆ ಕುಲಪತಿ ಡಾ. ಅಗಸರ್ ಕರೆ
ಕಲಬುರಗಿ ಜು.30: ಆರೋಗ್ಯ ಭಾಗ್ಯಕ್ಕಾಗಿ ಪ್ರತಿಯೊಬ್ಬರೂ ಸಾವಯವ ಆಹಾರ ಪದಾರ್ಥ ಬಳಕೆಗೆ ಒತ್ತು ಕೊಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರು ಕರೆ ನೀಡಿದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ, ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಜೈವಿಕ ಹಾಗೂ ರಾಸಾಯನಿಕ ವಿಜ್ಞಾನ ವಿಭಾಗಳ ವತಿಯಿಂದ ಹಮ್ಮಿಕೊಂಡ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒತ್ತಡದ ಬದುಕಿನ ನಡುವೆ ಆರೋಗ್ಯದ ಕಡೆಗೆ ಗಮನ ನೀಡುವದು ಮುಖ್ಯವಾಗಿದೆ ಎಂದರು.
ಇAದಿನ ಬದುಕಿನಲ್ಲಿ ಎಲ್ಲ ಭಾಗ್ಯ ಗಳಿಗಿಂತ ಆರೋಗ್ಯ ಭಾಗ್ಯ ಶ್ರೇಷ್ಠ ಭಾಗ್ಯ ಹೀಗಾಗಿ ರಾಸಾಯನಿಕ ಗೊಬ್ಬರ ಬಳಸಿದ ಪದಾರ್ಥಗಳಿಗಿಂತಲೂ ಸಾವಯವ ವಿಧಾನದಲ್ಲಿ ಬೆಳೆದ ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರೂ ಆದ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಮಾತನಾಡಿ, ಗುಣಮಟ್ಟದ ಆಹಾರಕ್ಕೆ ಒತ್ತು ಕೊಡಲು ಹೇಳಿದರು. ಮುಖ್ಯ ವಕ್ತಾರರಾಗಿ ನಾಡೋಜ್, ಖ್ಯಾತ ವೈದ್ಯ ಸಾಹಿತಿ ಡಾ. ಪಿ.ಎಸ್. ಶಂಕರ್, ಮುಖ್ಯ ಅತಥಿಗಳಾಗಿ ಅವರು ಆಗಮಿಸಿದ್ದರು. ಮಹಾರಾಷ್ಟ್ರದ ಮುಂಬೈನ ಪ್ರಾಧ್ಯಾಪಕಿ ಡಾ ಸೀಮಾ ಸಾಂಬ್ರಾಣಿ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಕಲಾ ಪಾಟೀಲ್, ಸಂಸ್ಥೆಯ ಕಾರ್ಯದರ್ಶಿ ಉದಯ್ ಚಿಂಚೊಳ್ಳಿ, ಆಡಳಿತ ಮಂಡಳಿಯ ಸದಸ್ಯರಾದ ನಿಶಾಂತ್ ಎಲಿ, ಪ್ರಿನ್ಸಿಪಾಲ್ ಡಾ. ರಾಜೇಂದ್ರ ಕೊಂಡಾ ಅವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಮೋಹನರಾಜ್ ಪತ್ತಾರ್, ಶ್ರೀಮತಿ ಉಮಾ ರೇವೂರ್, ಡಾ. ಮಹೇಶ್ ಗಂವಾರ್, ಡಾ. ಪ್ರೇಮಚಂದ್ ಚವ್ಹಾಣ್, ಡಾ. ವೈಜಿನಾಥ್ ವರ್ಮಾ, ಸಂಸ್ಥೆಯ ವಿಶೇಷ ಅಧಿಕಾರಿ ಡಾ. ಪರಮೇಶ್ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಣ 170ಕ್ಕಿಂತಲೂ ಹೆಚ್ಚು ವಿವಿಧ ವಿಶ್ವವಿದ್ಯಾಲಯ, ಹಾಗೂ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.