ದಲಿತ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷರಿಗೆ ಅಧಿಕೃತ ಆಮಂತ್ರಣ
ಕಲಬುರಗಿ ಜು.30: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿ ನಗರದಲ್ಲಿ ಆಗಸ್ಟ್ 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿರುವ ಜಿಲ್ಲಾ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ನೇಮಕಗೊಂಡ ಸಂಸದ ರಾಧಾಕೃಷ್ಣ ದೊಡ್ಮನಿ ಅವರಿಗೆ ಅಧಿಕೃತ ಆಹ್ವಾನ ನೀಡಿ ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸಂಸದ ರಾಧಾಕೃಷ್ಣ ದೊಡ್ಮನಿ ಅವರು ಮಾತನಾಡಿ, ಬಾವೈಕ್ಯತೆಯ ನೆಲವಾದ ಈ ಕಲ್ಯಾಣ ನಾಡಿನ ನೆಲದಲ್ಲಿ ನಡೆಸಲು ಉದ್ದೇಶಿಸಲಾಗಿರುವ ದಲಿತ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಜರುಗಬೇಕು. ಈ ಭಾಗದ ಶೋಷಿತರ ನೋವು-ನಲಿವು, ಕಷ್ಟ ಸವಾಲುಗಳು ಕುರಿತಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿ. ಇಡೀ ಸಮ್ಮೇಳನ ಯಶಸ್ವಿಯಾಗಿ ಜರುಗಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಸಮ್ಮೇಳನ ರೂಪು ರೇಷೆಗಳ ಬಗ್ಗೆ ಸಂಸದರಿಗೆ ವಿವರ ಮಾಹಿತಿ ನೀಡಿದರು. ವಿಶೇಷವಾದ ದಲಿತ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಮ್ಮ ಹಾಗೂ ಸರ್ವರ ಸಹಕಾರ ಮುಖ್ಯ ವಾಗಿದೆ ಎಂದ ಅವರು, ಪರಿಷತ್ತಿನ ಅಡಿಯಲ್ಲಿ ಹೊಸ ಆಲೋಚನೆಗಳನ್ನಿಟ್ಟುಕೊಂಡು ಸಾಂದರ್ಭಿಕ ಸಂದರ್ಭಗಳನ್ನು ಬಳಸಿಕೊಂಡು ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಈ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್, ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ್, ಪ್ರಮುಖರಾದ ಧರ್ಮಣ್ಣ ಎಚ್. ಧನ್ನಿ, ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ್ ಭಂಟನಳ್ಳಿ, ರಾಜೇಂದ್ರ ಮಾಡಬೂಳ್, ಧರ್ಮರಾಜ್ ಜವಳಿ, ಎಂ.ಎನ್. ಸುಗಂಧಿ, ಶಿವಕುಮಾರ್ ಬಾಳಿ, ಶಿವರಾಜ್ ಅಂಡಗಿ, ಕಲ್ಯಾಣಕುಮಾರ್ ಶೀಲವಂತ್, ಶಿವಾನಂದ್ ಪೂಜಾರಿ, ವಿನೋದಕುಮಾರ್ ಜೇನವೇರಿ, ಶಕುಂತಲಾ ಪಾಟೀಲ್, ಶಿಲ್ಪಾ ಜೋಶಿ, ಡಾ. ರೆಹಮಾನ್ ಪಟೇಲ್, ಶಿವಶರಣ್ ಬಡದಾಳ್, ಸುರೇಶ್ ದೇಶಪಾಂಡೆ, ವಿರೇಂದ್ರಕುಮಾರ್ ಕೊಲ್ಲೂರ್, ಗಣೇಶ್ ಚಿನ್ನಾಕಾರ್, ಬಾಬುರಾವ್ ಪಾಟೀಲ್, ಸೋಮಶೇಖರಯ್ಯಾ ಹೊಸಮಠ್, ರೇವಣಸಿದ್ದಪ್ಪ ಜೀವಣಗಿ, ಸೈಯದ್ ನಜಿರುದ್ದೀನ್ ಮುತ್ತವಲಿ, ರಮೇಶ್ ಡಿ. ಬಡಿಗೇರ್ ಮುಂತಾದವರು ಉಪಸ್ಥಿತರಿದ್ದರು.