ಗ್ರಾ.ಪಂ.ಗಳ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ
ಕಲಬುರಗಿ:ಜು.೩೦: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸ್ವಚ್ಛ ಭಾರತ ಮೀಷನ್ (ಗ್ರಾಮೀಣ), ಜಿಲ್ಲಾ ಪಂಚಾಯತ್, ಸಾಹಸ್ ಸಂಸ್ಥೆ ಹಾಗೂ ರೈನ್ ಮ್ಯಾಟರ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಮಿಷನ್ ಸ್ವಚ್ಛ ಕಲ್ಯಾಣ ಕರ್ನಾಟದ ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲೆಯ ೫೪ ಗ್ರಾಮ ಪಂಚಾಯಿತಿಗಳ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಕಲಬುರಗಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪಾ ಬಿ. ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ಕಾರುಣಿಕ ಕೊರೆ, ಎಮ್.ಹೆಚ್.ಹೆಚ್.ಎಮ್. ಜಿಲ್ಲಾ ಆರೋಗ್ಯ ತರಬೇತುದಾರರಾದ ಡಾ|| ಲಕ್ಷ್ಮಿದೇವಿ, ಎಸ್.ಬಿ.ಎಮ್.ಜಿ. ಸಮಾಲೋಚಕರು, ಸಾಹಸ್ ಸಂಸ್ಥೆಯ ಪಿ.ಸಿ. ರಾಜಶೇಖರ್ ಬಿರಾದಾರ್, ಸಿಬ್ಬಂದಿಗಳು, ಎನ್.ಆರ್.ಎಲ್.ಎಮ್., ಡಿ.ಪಿ.ಎಮ್., ಎಸ್.ಹೆಚ್.ಜಿ. ಮಹಿಳೆಯರು ಭಾಗವಹಿಸಿದ್ದರು