ಭಾರತೀಯ ಸಾಕ್ಷ ಅಧಿನಿಯಮಗಳ ಬಗ್ಗೆ ಅರಿವು ಅವಶ್ಯಕ: ಉಜ್ವಲ ಪಾಟೀಲ
ವಿಜಯಪುರ,ಜು.30: ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅವಶ್ಯಕವಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಾ ಅಧಿನಿಯಮಗಳ ಬಗ್ಗೆ ಅರಿವು ಅವಶ್ಯಕವಾಗಿದೆ ಎಂದು ನಗರದ ಅಂಜುಮನ್ ಕಾನೂನು ವiಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಉಜ್ವಲ ಸರನಾಡಗೌಡ ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗ ಸಂಯೋಜನಡಿಯಲ್ಲಿ ಜರುಗಿದ ‘ಮಿಥ್ಸ್ ಆಂಡ್ ಟ್ರುಥ್ ಭಾರತೀಯ ನ್ಯಾಯಸನ್ಹಿತ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಕಾನೂನಿನ ಮಹತ್ವ ಮತ್ತು ಅದರ ಅವಶ್ಯಕತೆ. ಅದರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಾ ಅಧಿನಿಯಮಗಳ ಬಗ್ಗೆ ಕ್ರಮವಾಗಿ ತಿಳಿಸಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಾ ಅಧಿನಿಯಮಗಳ ಐಪಿಸಿ ಇದು ಸಾರ್ವಜನಿಕರಿಗೆ ಹೇಗೆ ಸಹಾಯವಾಗಿದೆ, ಅದರಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಮತ್ತು ಅದನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿ ಇರುವ ಅಡೆತಡೆಗಳ ಬಗ್ಗೆ ತಿಳಿಸಿದರು.
ಭಾರತೀಯ ಸಾಕ್ಷಾ ಕಾಯ್ದೆ ಬದಲಿಗೆ ಅಪರಾಧ ನ್ಯಾಯ ವ್ಯವಸ್ಥೆಯನ್ನು ಆಧುನಿಕರಿಸಲು ಮತ್ತು ಸುಗಮಗೊಳಿಸಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತರನ್ನುಮಜಬೀನ್ ಖಾನ್ ಮಾತನಾಡಿ, ಕಾನೂನು ಎಷ್ಟು ಮುಖ್ಯ. ಅದು ವಿದ್ಯಾರ್ಥಿಗಳಿಗೆ ಹೇಗೆ ಸಹಾಯಕವಾಗುತ್ತದೆ ಮತ್ತು ಅದನ್ನು ವಿದ್ಯಾರ್ಥಿಗಳು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಿದ ಡಾ. ಉಜ್ವಲ ಸರನಾಡಗೌಡ ಪಾಟೀಲ ಅವರಿಗೆ ಧನ್ಯವಾದಗಳು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.