ಸಂಭ್ರಮದ ಕೌಡಿಪೀರ್ ಮೊಹರಂ ಉತ್ಸವ
ವಾಡಿ,ಜು.30-ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಹಿಂದೂ-ಮುಸ್ಲಿA ಭಾವೈಕ್ಯತೆ ಸಾರುವ ಕೌಡಿಪೀರ್ ಮೊಹರಂ ಹಬ್ಬದ ಸಂಭ್ರಮ ಸಡಗರದಿಂದ ರವಿವಾರ ಜರಗಿತು.
ಪ್ರತಿ ವರ್ಷ ನಡೆಯುವ ಮೊಹರಂ ಸಂಭ್ರಮದಲ್ಲಿ ಅಲಾಯಿ ಪೀರಗಳನ್ನು ಹಿಂದೂಗಳ ಕೈಯಲ್ಲಿ ನೀಡುವುದು ಇಲ್ಲಿನ ಸಂಪ್ರದಾಯವಾಗಿದೆ. ಶನಿವಾರ ಇಡೀ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಜ್ಜೆ ಕುಣಿತ ಹಾಗೂ ಮೊಹರಂ ಹಬ್ಬದ ಹಾಡುಗಳು ಸಂಗೀತದ ರಸದೌತಣ ನೀಡಿತು.
ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ, ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯಿತು. ವಿವಿಧ ರೀತಿಯ ಉಡುಪು ತೊಟ್ಟಿದ್ದ ಯುವಕರು ಹಲಿಗೆ ಕುಣಿತಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.
ದರ್ಗದ ಸಾಹೇಬ್ ಸೈಯದ ಮುಸ್ತಾಫ್ ಹುಸೇನ್ ನೇತೃತ್ವದಲ್ಲಿ ಇಸ್ಲಾಂ ಧರ್ಮದ ಸಂಪ್ರದಾಯಗಳ ಆಚರಣೆ ನೆರವೇರಿದವು. ರವಿವಾರ ಸಂಜೆ ಅಲಾಯಿ ಪೀರ್‌ಗಳನ್ನು ಹಳ್ಳಕೆ ತೆಗೆದುಕೊಂಡು ಹೋಗಿ ಸಂಪ್ರದಾಯ ಮೂಲಕ ದಫನ್ ಆಚರಿಸಲಾಯಿತು.
ಗ್ರಾಮದ ಮುಖಂಡರಾದ ಬಾಬು ಸಾಹೇಬ್, ಚಂದ್ರಪ್ಪ ಕರದಳ್ಳಿ, ಬಸವರಾಜಗೌಡ ಪೋ|ಪಾಟೀಲ, ಅಯ್ಯಣ್ಣಗೌಡ ಪೋ|ಪಾಟೀಲ, ಚಂದ್ರಶೇಖರ ಇಂದೂರ, ಖದೀರ್ ಅಲ್ಲೂರ್, ಮಹ್ಮದ ಜಿಲಾನಿ ಮುಲ್ಲಾ, ಹುಸೇನ್ ಸಾಬ್, ದೇವಿಂದ್ರಪ್ಪಗೌಡ ಶಿರವಾಳ, ದೂಳಪ್ಪ ಯರಗಲ್, ಶಾಂತುಗೌಡ ಮಾಲಿ ಪಾಟೀಲ, ಸಿದ್ರಾಮ ಕರದಳ್ಳಿ, ಖದೀರ್ ಮುಲ್ಲಾ, ರಹೆಮನಸಾಬ್ ಬಾಂಬೆ, ಬಾಬುರಾವ ಅಣಿಕೇರಿ, ಭೀಮರಾಯ ಗಂಗನೋರ ಸೇರಿದಂತೆ ಅನೇಕರು ಪಾಲ್ಗೋಂಡಿದ್ದರು.