ಆ.1ರಂದು ಸುಕ್ಷೇತ್ರ ಗುಡ್ಡಾಪೂರದಲ್ಲಿ ಕರ್ನಾಟಕ ಭವನ ಲೋಕಾರ್ಪಣೆ: ವಿಜುಗೌಡ ಪಾಟೀಲ
ವಿಜಯಪುರ,ಜು.30 : ಭಕ್ತರ ಕಾಮಧೇನು, ವರದಾನಿ ತಾಯಿ ದಾನಮ್ಮದೇವಿಯ ಸನ್ನಿಧಿ ಸುಕ್ಷೇತ್ರ ಗುಡ್ಡಾಪೂರದಲ್ಲಿ ಕರ್ನಾಟಕ ಭವನ (ದಾಸೋಹ ಮನೆ) ಲೋಕಾರ್ಪಣೆ ಸಮಾರಂಭ ಆಗಸ್ಟ್ 1 ರಂದು ಮಧ್ಯಾಹ್ನ 12 ಕ್ಕೆ ಜರುಗಲಿದೆ ಎಂದು ಶ್ರೀ ದಾನಮ್ಮದೇವಿ ದೇವಾಲಯ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದರು.
ಮಂಗಳವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿ ದಾನಮ್ಮದೇವಿ ಕರುಣಾಮಯಿ, ತಾಯಿಯ ದರ್ಶನಾಶೀರ್ವಾದ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಭಕ್ತ ವರ್ಗ ಪಾದಯಾತ್ರೆ ಮೂಲಕ ಗುಡ್ಡಾಪೂರ ತಲುಪುತ್ತಾರೆ. ಈಗ ಅಲ್ಲಿ ಭವ್ಯ ಕರ್ನಾಟಕ ಭವನ ನಿರ್ಮಾಣಗೊಂಡಿದ್ದು ಆ.1 ರಂದು ಲೋಕಾರ್ಪಣೆ ನಡೆಯಲಿದೆ.
ದುಧನಿಯ ಶ್ರೀ ಜಡೆ ಶಾಂತಲಿAಗೇಶ್ವರ ಮಹಾಸ್ವಾಮೀಜಿ, ಮುಗಳಖೋಡ – ಜಿಡಗಾ ಮಠದ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ, ಅವಧೂತ ವಿನಯ್ ಗುರೂಜಿ, ಬಬಲೇಶ್ವರ ಬೃಹನ್ಮಠದ ಶ್ರೀ ಡಾ.ಮಹಾದೇವ ಶಿವಾಚಾರ್ಯರು, ಡಾ.ಜಯಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವ ರಾಮಲಿಂಗಾರೆಡ್ಡಿ ಸಮಾರಂಭವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ ಎಂದರು.
ಜತ್ತ ಶಾಸಕ ವಿಕ್ರಂಸಿAಹ ಸಾವಂತ ಅಧ್ಯಕ್ಷತೆ ವಹಿಸಲಿದ್ದಾರೆ.
ಮಹಾರಾಷ್ಟ್ರ ಸಚಿವ ಸುರೇಶ ಖಾಡೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸೇರಿದಂತೆ ವಿಜಯಪುರ, ಬೆಳಗಾವಿಯ ಎಲ್ಲ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುಜರಾಯಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರ ಪ್ರಯತ್ನದಿಂದಾಗಿ ಈ ಭವನ ನಿರ್ಮಾಣಗೊಳ್ಳಲು ಸಾಧ್ಯವಾಗಿದ್ದು, 11 ಕೋಟಿ ರೂ.ವೆಚ್ಚದಲ್ಲಿ ಈ ಭವನ ನಿರ್ಮಾಣಗೊಂಡಿದ್ದು ಒಂದು ಪಂಕ್ತಿಯಲ್ಲಿ ನಾಲ್ಕು ಸಾವಿರ ಜನರು ಏಕಕಾಲಕ್ಕೆ ಪ್ರಸಾದ ಸೇವಿಸಲು ಸಾಧ್ಯವಾಗುವಷ್ಟು ವಿಶಾಲವಾಗಿ ನಿರ್ಮಿಸಲಾಗಿದೆ ಎಂದರು.
ಸುಕ್ಷೇತ್ರ ಗುಡ್ಡಾಪೂರ ದೇವಾಲಯ ಅಭಿವೃದ್ದಿಗೆ ಸಂಬAಧಿಸಿದAತೆ ಮಹಾರಾಷ್ಟ್ರ ಸರ್ಕಾರದಿಂದ ಯಾವ ಅನುದಾನವೂ ಬಂದಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲು ಕೋರಲಾಗುವುದು, ಆದರೆ ಕರ್ನಾಟಕದ ಎಲ್ಲ ಪಕ್ಷಗಳು ಅಧಿಕಾರದಲ್ಲಿದ್ದಾಗ ದೇವಾಲಯಕ್ಕೆ ಅನುದಾನ ಒದಗಿಸಿವೆ ಎಂದರು.
ದೇವಾಲಯದ ಆವರಣದಲ್ಲಿ ಸಲಹಾ ಪೆಟ್ಟಿಗೆ ಸ್ಥಾಪನೆ ಮೊದಲಾದ ರೀತಿಯ ಕಾರ್ಯಚಟುವಟಿಕೆಗಳನ್ನು ಸಂಘಟಿಸಲು ತೀರ್ಮಾನಿಸಲಾಗಿದೆ.
ಒತ್ತುವರಿಯಾಗಿದ್ದ ವಾಹನ ಪಾರ್ಕಿಂಗ್ ಜಾಗದ ಅತಿಕ್ರಮಣ ತೆರವುಗೊಳಿಸಿ ನಾಲ್ಕು ಎಕರೆ ಪಾರ್ಕಿಂಗ್ ಮೀಸಲಿರಿಸಲಾಗಿದೆ,
ದೇವಾಲಯ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಕೋಶಾಧ್ಯಕ್ಷ ಚಂದ್ರಶೇಖರ ಇಂಡಿ, ನಿರ್ದೇಶಕರಾದ ಸದಾಶಿವ ಗುಡ್ಡೋಡಗಿ, ಶಂಭುಲಿAಗ ಮಮದಾಪೂರ, ಸಾಗರ ಕಂಪಣ್ಣನವರ, ದಾನಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.