ಜಿ.ಪಿ.ಎಸ್ ಮತ್ತು ಪ್ಯಾನಿಕ್ ಬಟನ್ ಆಳವಡಿಕೆಗೆ ವಿರೋಧ
ಕೊಲ್ಹಾರ:ಜು.30: ವಾಹನಗಳಿಗೆ ಪ್ಯಾನಿಕ್ ಬಟನ್, ಜಿಪಿಎಸ್ ಅಳಡಿಕೆ ಮಾಡಲು ಸರ್ಕಾರ ಆದೇಶ ನೀಡಿರುವುದು ಅವೈಜ್ಞಾನಿಕ ಕೂಡಲೇ ಸರ್ಕಾರ ಆದೇಶ ಹಿಂಪಡೆಯಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟ ಸಂಘದ ಕೊಲ್ಹಾರ ತಾಲೂಕಾ ಪದಾಧಿಕಾರಿಗಳ ನೇತೃತ್ವದಲ್ಲಿ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ತಾಲೂಕ ಅಧ್ಯಕ್ಷ ಸಿದ್ಧ ಗಣಿ ಮಾತನಾಡಿ ವಾಹನಗಳಿಗೆ ಜಿ.ಪಿ.ಎಸ್ ಮತ್ತು ಪ್ಯಾನಿಕ್ ಬಟನ್ ಆಳವಡಿಸಲು ಸರ್ಕಾರದ ಆದೇಶ ನೀಡಿದ್ದು ಅವೈಜ್ಞಾನಿಕವಾಗಿದೆ ಹಾಗೂ ಬಡ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಏಜೆಂಟರ ಹಾವಳಿ ಅತಿಯಾಗಿದ್ದು ಚಾಲನಾ ಪರವಾನಿಗೆ, ಚಾಲನಾ ನವೀಕರಣ ಹಾಗೂ ಇತರೆ ಕೆಲಸಗಳಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದರೆ ಅಧಿಕಾರಿಗಳು ಸ್ಪಂದನೆ ನೀಡದೆ ಏಜೆಂಟರ ಮೂಲಕ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಅತಿ ಹೆಚ್ಚಿನ ಮೊತ್ತ ಪಡೆದು ಕೆಲಸಗಳನ್ನು ಮಾಡುತ್ತಿದ್ದಾರೆ ಹಣ ಕೊಡದಿದ್ದಲ್ಲಿ ಸುಖಾಸುಮ್ಮನೆ ಚಾಲಕರನ್ನು ಸತಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೈಬು ನದಾಫ, ಹಸನ ಕಲಾದಗಿ, ಅಮೀರ ಕೊರ್ತಿ, ಅಶ್ಪಾಕ ರಬಿನಾಳ, ಶಿವು ಹಗೆದಾಳ, ಆನಂದ ಬಜಂತ್ರಿ, ಗೈಬು ಹಳ್ಳಿ, ಕಾಲೀಕ ರಬಿನಾಳ, ಕಾಡು ನಾಲತವಾಡ ಹಾಗೂ ಇನ್ನಿತರರು ಇದ್ದರು.