ಆಡಳಿತ ಮತ್ತು ಸಮಾಜದಲ್ಲಿ ವಿಜ್ಞಾನ ತಂತ್ರಜ್ಞಾನದ ಮಹತ್ವ ವಿಚಾರಗೋಷ್ಠಿ
ಬೀದರ :ಜು.30: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜ್ಞಾನ ಶಿಕ್ಷಕರು ಹಾಗೂ ಜಿಲ್ಲಾಧ್ಯಕ್ಷರು ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೀದರನ ಶ್ರೀ ದೇವಿಪ್ರಸಾದ ಕಲಾಲ ಅವರು ಮಾತನಾಡುತ್ತಾ ಇಂದು ಜಗತ್ತಿನ ಹಲವಾರು ವೈಜ್ಞಾನಿಕ ಸಂಶೋಧನೆಗಾಗಿ ಹಾತೋರಿಯುತ್ತಿವೆ ಅದರಲ್ಲಿ ಭಾರತಕ್ಕೆ ಅಗ್ರಗಣ್ಯ ಸ್ಥಾನ ಭಾರತೀಯ ವಿಜ್ಞಾನಿಗಳು ವಿಶ್ವದ ನಾನಾ ದೇಶಗಳಲ್ಲಿ ತಮ್ಮ ಸೇವೆ ಸಲ್ಲಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಉದಹಾರಣೆಗೆ ಅಂತರಿಕ್ಷ ಮಹಿಳಾ ವಿಜ್ಞಾನಿಯಾದ ಸುನೀತಾ ವಿಲಿಯಮ್ಸ್ರವರ ಮಹತ್ವಪೂರ್ಣ ಸಾಧನೆ ಹಾಗೂ ಇವರಂತೆ ದಿವಂಗತ ಕಲ್ಪನಾ ಚಾವ್ಲಾ ಕೂಡ ಭಾರತದ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ. ನಮ್ಮ ದೇಶ ಆಡಳಿತಾತ್ಮಕವಾಗಿ 2016ರಲ್ಲಿ ಡಿಮೊನಿಟೈಜೇಷನ್ ಮಾಡಿ ಡಿಜಿಟಲೀಕರಣ ಪ್ರಾರಂಭಿಸಿತು. ಈಗೀನ ದಿನಗಳಲ್ಲಿ ಮೋಬೈಲ್ ಕ್ರಾಂತಿಯನ್ನೇ ಉಂಟುಮಾಡಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರ ಕೈಯಲ್ಲಿ ಮೋಬೈಲ್ ತಂತ್ರಜ್ಞಾನ ಹಾಸು ಹೊಕ್ಕಾಗಿದೆ. ಸಾಮಾಜಿಕವಾಗಿ ರೈತರಿಗೆ ಪ್ರತಿಯೊಂದು ಬೆಳೆ, ವಾತಾವರಣ ಅಲ್ಲದೇ ಮಣ್ಣಿನ ಗುಣಧರ್ಮ ಹಾಗೂ ಬಿತ್ತನೆ ಬೀಜ ಮುಂತಾಗಿ ಆನ್‌ಲೈನಿನ ಮುಖಾಂತರ ಪ್ರಸಾರವಾಗುತ್ತಿದ್ದು ಭಾರತ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದೆ.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಶ್ರೀ ಬಾಬುರಾವ ದಾನಿಯವರು ಮಾತನಾಡುತ್ತಾ ಇಂದು ವಿಜ್ಞಾನ ವಿಲ್ಲದೇ ಬದುಕ್ಕಿಲ್ಲ ಮಾನವನ ಜೀವನದಲ್ಲಿ ಪ್ರತಿಕ್ಷಣ ವಿಜ್ಞಾನ ಹೊಸೆದುಕೊಂಡಿದೆ. ಇಂದು ಮಾನವನ ವಿದ್ಯುತ್ ದೀಪದಿಂದ ಮೊಬೈಲ್‌ವರೆಗೆ ನಿರಂತರವಾಗಿ ಬೆರೆತುಹೋಗಿದ್ದಾನೆ. ನೂರು ವ್ಯಕ್ತಿಯ ಕೆಲಸ ಒಂದು ಯಂತ್ರ ಮಾಡುತ್ತಿದೆ ಹೀಗಾಗಿ ಮಾನವನ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ ಎಂದು ಶಿಬಿರಾರ್ಥಿಗಳಿಗೆ ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಶಿಬಿರಾರ್ಥಿಗಳು ವಿಜ್ಞಾನ ಮತ್ತು ತಂತ್ರöಜ್ಞಾನದ ಮಹತ್ವವನ್ನು ಅರಿತುಕೊಂಡು ತಾವುಗಳು ಉನ್ನತ ಹುದ್ದೆಗಳು ಪಡೆದುಕೊಂಡಾಗ ತಾವು ನಿರ್ವಹಿಸುವ ಕಾರ್ಯದಲ್ಲಿ ವಿಜ್ಞಾನದ ಬಳಕೆಯಿಲ್ಲದೆ ಇಂದು ಯಾವುದೇ ಕೆಲಸವಾಗಲು ಸಾಧ್ಯವಿಲ್ಲ ಮಾಜಿ ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದಂತೆ ಜೈ ಜವಾನ್, ಜೈ ಕಿಸಾನ್, ಮುಂದುವರೆದು ಜೈ ವಿಜ್ಞಾನ ಎಂದು ಹೇಳಿದ್ದು ವಿಶ್ವಕ್ಕೆ ಅಣುಶಕ್ತಿಯಲ್ಲಿ ಭಾರತವು ಗಮನಾರ್ಹ ಸಾಧನೆಗೈದಿದೆ ಎಂದರು ಹಾಗೂ ಶಿಬಿರಾರ್ಥಿಗಳು ಸಹ ವಿಜ್ಞಾನದ ಅಂಶಗಳನ್ನು ಹೆಚ್ಚಾಗಿ ತಿಳಿದುಕೊಂಡು ವಿಜ್ಞಾನಿಗಳಾಗಿ ದೇಶದ ಹಾಗೂ ನಿಮ್ಮ ಗ್ರಾಮದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆAದು ಕರೆಕೊಟ್ಟರು.
ಕಾರ್ಯಕ್ರಮದ ವೇದಿಕೆಯ ಮೇಲೆ ಗೌರವ ಉಪಸ್ಥಿತಿಯನ್ನು ಡಾ. ಶಿವಲೀಲಾ ವೀರಯ್ಯಾ, ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ದೀಪಾ ರಾಗ ಹಾಗೂ ‘ಬ’ ಘಟಕದ ಅಧಿಕಾರಿಗಳಾದ ಶ್ರೀ ಬಸವರಾಜ ಬಿರಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಕು: ಪ್ರೀಯಾರಾಣಿ ಸ್ವಾಗತ ಗೀತೆ ಹಾಡಿದರೆ, ಕು: ಸಾಹೀಲ್ ಅಬ್ಬಾಸ್ ಸ್ವಾಗತ ಮಾಡಿದರೆ, ಕು: ವಂಚನಾAಬಿಕಾ ಬಿ.ಎ. 6ನೇ ಸೆಮಿಸ್ಟರ ನಿರೂಪಿಸಿದರೆ, ಮಹಾವಿದ್ಯಾಲಯದ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಾಣಿಶ್ರೀ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.