ನಾಗಠಾಣದಲ್ಲಿ ಅಂತರಾಷ್ಟ್ರೀಯ ಸ್ನೇಹಿತರ ದಿನ ಆಚರಣೆ
ವಿಜಯಪುರ,ಜು.30: ಸ್ನೇಹ ಎಂಬ ಒಳ್ಳೆಯ ಬಾಂಧವ್ಯದ ಮಹತ್ವವನ್ನು ಸಾರಲು ಪ್ರತಿ ವರ್ಷ ಜುಲೈ 30 ರಂದು ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ, ಶ್ರೀನಿಧಿ, ದೀಪಾ, ಸಾಕ್ಷಿ, ಶಾಂತಮ್ಮ,
ಮೋಕ್ಷ, ಸಮೃದ್ಧಿ, ಪವಿತ್ರಾ ಸೇರಿದಂತೆ ಅನೇಕ ಮಕ್ಕಳು ಪರಸ್ಪರ ಹಸ್ತಲಾಘವ ಮಾಡಿ ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಿದರು.
ಫ್ರೆಂಡ್‌ಶಿಪ್ ಇದೊಂದು ಸುಮಧುರ ಬಾಂಧವ್ಯ. ನಮಗೆ ಯಾವುದೇ ಸಮಸ್ಯೆಯಿದ್ದರೂ ಅದಕ್ಕೊಂದು ಪರಿಹಾರ ನಮ್ಮ ಗೆಳೆಯರ ಬಳಿ ಇರುತ್ತದೆ ಎಂಬ ಬಲವಾದ ನಂಬಿಕೆ. ಸುಖ-ದುಃಖ, ನೋವು-ನಲಿವುಗಳಲ್ಲಿ ನಮ್ಮ ಕುಟುಂಬದವರAತೆ ನಮ್ಮೊಂದಿಗೆ ಇರುವುದು ನಮ್ಮ ಸ್ನೇಹಿತರು. ಈ ಸ್ನೇಹ ಬಾಂಧವ್ಯ ಶುದ್ಧ ಸ್ವರೂಪದ್ದಾಗಿದ್ದು, ರಕ್ತ ಸಂಬAಧವಲ್ಲವಾದರೂ ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಮನುಷ್ಯನನ್ನು ಸಮಾಜದಲ್ಲಿ ಒಂದಾಗಿಸುವುದು ಗೆಳೆಯರ ಗುಂಪು. ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರ, ಆತಿಥ್ಯವಿದೆ. ಮಹಾಭಾರತದಲ್ಲಿ ಕಂಡುಬರುವ ದುರ್ಯೋಧನ ಮತ್ತು ಕರ್ಣ ಅವರಿಬ್ಬರ ಅಪ್ರತಿಮ ಗೆಳೆತನ ಇಂದಿಗೂ ಚಿರಸ್ಥಾಯಿಯಾಗಿದೆ.
ಜನರ ನಡುವೆ ಸ್ನೇಹವಿದ್ದರೆ ಸಮುದಾಯಗಳ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ವಿಶ್ವದ ಎಲ್ಲ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿ, ವಿಶ್ವ ಶಾಂತಿಗೆ ಸ್ಫೂರ್ತಿಯಾಗುತ್ತದೆ ಎನ್ನುವ ಉದ್ದೇಶದಿಂದ ಈ ಆಚರಣೆಯು ಮಹತ್ವ ಪಡೆದುಕೊಂಡಿದೆ.