ಆರೋಗ್ಯ ಶಿಬಿರ ಯಶಸ್ವಿ
ಕೆಂಭಾವಿ:ಜು.30:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಲ್ಲಿ ಕೆಂಭಾವಿ ಪತ್ರಕರ್ತರ ಬಳಗದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ, ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಹಾಗೂ ವಿನಾಯಕ ಪ್ರಥಮ ಚಿಕಿತ್ಸೆ ಆಸ್ಪತ್ರೆ ವತಿಯಿಂದ ನಡೆದ ಉಚಿತ ಆರೋಗ್ಯ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿ ಆಯುಷ್ ಔಷಧಿ ಮಳಿಗೆಗಳಿಗೆ ಭೇಟಿ ನೀಡಿದರು.
ಪಟ್ಟಣದಲ್ಲಿನ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರು ಆಗಮಿಸಿ ಔಷಧಿಗಳನ್ನು ಪಡೆದುಕೊಂಡರು. ಆಯಷ್ ಇಲಾಖೆ ವತಿಯಿಂದ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು. ಪಟ್ಟಣದ ವಿನಾಯಕ ಪ್ರಥಮ ಚಿಕಿತ್ಸೆ ಆಸ್ಪತ್ರೆ ವತಿಯಿಂದ ಇಸಿಜಿ, ಬಿಪಿ ಹಾಗೂ ರಕ್ತ ತಪಾಸಣೆ ಮಾಡಲಾಯಿತು.
ಆಯುಷ್ ಇಲಾಖೆಯಿಂದ ವೈದ್ಯಾಧಿಕಾರಿ ಡಾ.ಮೀರಾ ಜೋಷಿ, ವಿನಾಯಕ ಆಸ್ಪತ್ರೆಯಿಂದ ಡಾ.ದಯಾನಂದರೆಡ್ಡಿ ಡಿಗ್ಗಾವಿ, ಯಾದಗಿರಿಯ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ದೀಪಾ ರಾಠೋಡ, ಡಾ.ಶಫೀಕ ಅಹಮದ್, ಡಾ.ಇಮಾಮುದ್ದೀನ, ಡಾ.ಎಮ್.ಬಿ.ಪಾಟೀಲ, ಡಾ.ಪ್ರಮೋದ ಕುಲಕರ್ಣಿ, ಡಾ.ರಮೇಶ ಸಜ್ಜನ, ಎಓ ರವಿ, ಕೆಂಭಾವಿಯ ಸಿಬ್ಬಂದಿ ಸಂಗೀತಾ ತಪಾಸಣೆ ನಡೆಸಿದರು.