ವಾರದೊಳಗೆ 135 ತರಕಾರಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಿ
ಭಾಲ್ಕಿ:ಜು.30: ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ವಾರದೊಳಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಭಾನುವಾರ ತರಕಾರಿ ವ್ಯಾಪಾರಸ್ಥರು ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ತರಕಾರಿ ಮಾರಾಟಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ವ್ಯಾಪಾರಸ್ಥರ ಮನವಿಯನ್ನು ಆಲಿಸಿದ ಸಚಿವರು ಸ್ಥಳದಲ್ಲಿಯೇ ಪುರಸಭೆ ಅಧಿಕಾರಿಗೆ ಸೂಚಿಸಿ ಸಂಗಮೇಶ ಚಿತ್ರ ಮಂದಿರ ರಸ್ತೆಯ ಫುಲೆ ವೃತ್ತ ಸಮೀಪದ ಖಾಲಿ ನಿವೇಶನದಲ್ಲಿ 135 ತರಕಾರಿ ವ್ಯಾಪಾರಿಗಳಿಗೆ 10 12 ಅಳತೆಯ ನಿವೇಶನ ನೀಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಬ್ದುಲ್ ಸತ್ತಾರ್, ಅಬ್ದುಲ್ ಗಫಾರ್, ಎಂ.ಡಿ.ಮೊಯೀಸ್, ನಸೀರಮಿಯ್ಯ, ಇಸ್ಮಾಯಿಲ್ ಎಡುರೆ, ರಫೀಕ್ ಸೇರಿದಂತೆ ಹಲವರು ಇದ್ದರು.