ಡೆಂಗ್ಯೂ, ಚಿಕುನ್ ಗುನ್ಯಾ, ಹಾಗೂ ಕುಷ್ಟರೊಗ ಕುರಿತು ಮುಂಜಾಗ್ರತೆ ಕಾರ್ಯಕ್ರಮ
ಭಾಲ್ಕಿ :ಜು.30:ಶ್ರೀಮತಿ ಎಸ. ಎಸ್. ಬಿ ಪ್ರೌಢಶಾಲೆ ಮತ್ತು ಅಲ್ಲಮಪ್ರಭು ಗುರುಕುಲ ಪ್ರಾಥಮಿಕ ಶಾಲೆ ಕಾಸರತುಗಾವ ಶಾಲೆಯಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ, ಹಾಗೂ ಕುಷ್ಟರೊಗ ಕುರಿತು ಮುಂಜಾಗ್ರತಾ ಕ್ರಮ ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಲಖನಗಾoವ ವತಿಯಿಂದ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಡಾ. ನಂದುಕುಮಾರ ಸರ್ ಅವರು ರೋಗ ಹರಡದಂತೆ ನಾವು ನಮ್ಮ ಸುತ್ತ ಮುತ್ತ ಶುದ್ಧ, ಸ್ವಚ್ಛ ವಾತಾವರಣ ಇಟ್ಟುಕೊಳ್ಳಬೇಕು, ನೀರು ಹೊಲಸು ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು , ಮುಖ್ಯಗುರುಗಳಾದ ಮಲ್ಲಿಕಾರ್ಜುನ ಪಾಟೀಲ್. ವ್ಯವಸ್ಥಾಪಕರಾದ ಸಂಗಮೇಶ ಸಾವಳೆ, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.