ಜಾವೆಲಿನ್ ಡೇ ನಿಮಿತ್ಯ ಕ್ರೀಡಾಕೂಟ
ಕಲಬುರಗಿ: ಜು.30:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ರವರ ಸಹಯೋಗದಲ್ಲಿ ಜಾವೆಲಿನ್ ಡೇ ನಿಮಿತ್ಯ ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವ ಸಪ್ಲಿ ಕಣೋ ಮತ್ತು ಕ್ರೀಡಾ ಇಲಾಖೆ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಕುಮಾರ್ ಮತ್ತು ಜಿಲ್ಲಾ ಅಥ್ಲೆಟಿಕ್ಸ್ ಕಾರ್ಯದರ್ಶಿ ಧನರಾಜ ಬಾಸಗಿ ಬಾಬಳಗಾವ್, ನಾಗರಾಜ್ ಮಾಳಗೆ, ಸಂಜಯ್ ಬಾಣದ್, ಸಂತೋಷ್ ಡಿಗಿ, ದತ್ತಾತ್ರೇಯ ಜೇವರ್ಗಿ, ಸಂತೋಷ್ ಬಾವಿಮನಿ, ಪ್ರವೀಣ್ ಪುಣೆ ಉಪಸ್ಥಿತರಿದ್ದರು. ಉಮೇಶ್ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು ಈ ಕ್ರೀಡಾಕೂಟದಲ್ಲಿ ಸುಮಾರು 450 ಬಾಲಕ ಬಾಲಕಿಯರು ಭಾಗವಹಿಸಿದರು ಎಂದು ಸಂತೋಷ್ ಬಾವಿಮನಿ ತಿಳಿಸಿದರು.