ಆತ್ಮ ಹೆಣ್ಣೋ, ಗಂಡೋ ಯಾರಿಗೂ ಗೊತ್ತಿಲ್ಲಾ:ಬಿರಾದಾರ
ತಾಳಿಕೋಟೆ:ಜು.30: ಆತ್ಮ ಅನ್ನುವದು ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಬಯಲು ಮುಂದೆ ಬಯಲು ಬಯಲಾಗಿ ಹೋಗುತ್ತದೆ ಅಂದಹಾಗೆ ಆತ್ಮದ ಕುರಿತು ವಿಚಾರ ಮಾಡಿದರೆ ಭಯವಾಗುತ್ತದೆ ಎಂದು ಬೆನಕನಹಳ್ಳಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾದ ಸಾಹೇಬಗೌಡ ಬಿರಾದಾರ ಅವರು ನುಡಿದರು.
ಸೋಮವಾರರಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ತಾಳಿಕೋಟೆ ವತಿಯಿಂದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಆದ್ಯಾತ್ಮೀಕ ಚಿಂತನೆ ಹಾಗೂ ಕಾಯಕವೇ ಕೈಲಾಸ ಎಂಬ ವಿಷಯ ಕುರಿತು ಮಾತನಾಡುತ್ತಿದ್ದ ಅವರು ಬಸವಣ್ಣನವರು ಹೋದ ಮೇಲೆ 800 ವರ್ಷಗಳು ಘತಿಸಿದ ಮೇಲೆಯೂ ಚಿಂತನೆ ಮಾಡುವಂತಹ ಸ್ಥಿತಿ ಮುಂದುವರೆದಿದೆ ಆತ್ಮ ಪರಮಾತ್ಮ ಅಂದರೆಮನಸ್ಸನ್ನು ದೊಡ್ಡದು ಮಾಡಿಕೊಳ್ಳುವದ್ದಾಗಿದೆ ಎಂದರು. ಕಾಮ, ಕ್ರೋದ, ಮದ, ಮತ್ಸರ ಅಳಿದರೆ ಬಸವಣ್ಣನವರ ತತ್ವ ಅಳವಡಿಸಿ ಕೊಂಡAತಾಗುತ್ತದೆ ಆದರೆ ಆತ್ಮ ಎಲ್ಲಿಗೆ ಹೋಗುತ್ತದೆ ಎಂಬುದರ ಬಗ್ಗೆ ಯಾರಿಂದಲೂ ಉತ್ತರವಿಲ್ಲಾವೆಂದರು. ಆತ್ಮ ಸಂತೃಪ್ತಿಯಾಗಬೇಕಾದರೆ ದುಡುಕುವದನ್ನು ನಿಲ್ಲಿಸಬೇಕು ನಿಧಾನವಾಗಿ ಆಲಿಸಿ ಪಾಲಿಸಿದರೆ ಆವಾಗ ತೃಪ್ತಿ ಎಂಬುದು ದೊರೆಯುತ್ತದೆ ಎಂದರು. ಸಂಸಾರದಲ್ಲಿ ಆದ್ಯಾತ್ಮ ಕಾಯಕದಲ್ಲಿಯೇ ತಂದು ಕೊಳ್ಳುವಂತೆ ನೀತಿ ಎಂಬುದನ್ನು ಬಸವಣ್ಣನವರು ತಿಳಿಸಿದ್ದಾರೆ. ಪ್ರಜ್ಞೆ ಎಂಬುದರ ಬಗ್ಗೆ ತಿಳಿಸಿಕೊಟ್ಟವರು ಬಸವಣ್ಣನವರು ಆಗಿದ್ದಾರೆಂದು ಹೇಳಿದ ಬಿರಾದಾರ ಅವರು ವಿಭೂತಿ ಲಿಂಗವನ್ನು ಕಟ್ಟಿಕೊಂಡು ಬಸವಣ್ಣನವರ ತತ್ವದೊಂದಿಗೆ ಬಂದಿದ್ದೇವೆ ಎಂದು ಹೇಳಿದ ಅವರು ವಿಶ್ವರಾದ್ಯ, ಭೀಮಾಶಂಕರ ಅವರ ವಿಚಾರಗಳ ಕುರಿತಿ ತಿಳಿಸಿದ ಅವರು ಕಾಯಕದಲ್ಲಿ ಸತ್ಯ ಶುದ್ದತೆ ಎಂಬುದು ಬೇಕೆಂದು ಬಸವಣ್ಣನವರ ಕುರಿತು ಹಾಗೂ ಸೋಮಣ್ಣನವರ ಹಾಗೂ ವಿಜಯಪುರ ಸಿದ್ದೇಶ್ವರ ಮಹಾ ಸವಾಮಿಗಳ ಕುರಿತು, ಅಂಬಿಗೇರ ಚೌಡಯ್ಯ, ಬಸವಣ್ಣನವರ ಕಾಲದ ಶರಣರ ಕುರಿತು ಅವರ ವಿಚಾರಗಳನ್ನು ಸ್ಪಷ್ಟಪಡಿಸಿ ಕಾಯಕವನ್ನು ಮಾಡಬೇಕೆಂಬುದೇ ಅವರೆಲ್ಲರದ್ದಾಗಿತ್ತೆಂದರು.
ಅತಿಥಿಗಳಾಗಿ ಆಗಮಿಸಿದ ಇನ್ನೋರ್ವ ನಿವೃತ್ತ ಶಿಕ್ಷಕರಾದ ಚನ್ನಪ್ಪ ಮೇಣಸಿನಕಾಯಿ ಅವರು ಮಾತನಾಡಿ ಕಾಯಕವೇ ಕೈಲಾಸ ಎಂಬುದರ ಕುರಿತು ಬಸವಣ್ಣನವರ ವಚನಗಳು ಇಂದಿನ ಕಾಲದಲ್ಲಿಯೂ ಪ್ರಸ್ತುತವಾಗಿವೆ ಕಷ್ಟಪಟ್ಟು ದುಡಿದು ತಿನ್ನುವಂತಹ ತತ್ವ ಅವರದ್ದಾಗಿತ್ತು ಕಾಯಕವೇ ಕೈಲಾಸ ಎಂಬುದರ ಕುರಿತು ಅವರು ಅರ್ಥೈಸಿ ತಿಳಿಸಿದ್ದಾರೆ ಆಧುನಿಕ ಮನೋಪೂರ್ವಕವಾಗಿ ಕೆಲಸ ಮಾಡುವದೇ ಒಳ್ಳೆಯ ಕಾಯಕವಾಗುತ್ತದೆ ಪ್ರಚಾರಕ್ಕಾಗಿ ಕಾಯಕವಾಗಬಾರದೆಂದು ಚಿಕ್ಕ ಕಥೆಯೊಂದನ್ನು ಹೇಳಿ ಮನವರಿಕೆ ಮಾಡಿದರು.
ಅಧ್ಯಕ್ಷತೆ ವಹಿಸಿದ ನಿವೃತ್ತ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಬಿ.ಆರ್.ಪೊಲೀಸ್‌ಪಾಟೀಲ ಅವರು ಮಾತನಾಡಿ ಆದ್ಯಾತ್ಮ ಚಿಂತನ ಹಾಗೂ ಕಾಯಕವೇ ಕೈಲಾಸ ಎಂಬ ಇಂದಿನ ವಿಚಾರದಾರೆಯನ್ನು ಎಲ್ಲರಿಗೂ ಉಣಬಡಿಸಲು ಪ್ರಯತ್ನಿಸಿದಂತಹ ಮುಖ್ಯ ಅತಿಥಿ ಸಾಹೇಬಗೌಡ ಬಿರಾದಾರ ಅವರ ಮಾತಿನ ಶೈಲಿ ಬಹಳೇ ಮಾರ್ಮಿಕವಾಗಿತ್ತು ಏನೇ ಇರಲಿ ಈ ಹಿಂದಿನ ಶ್ರೀಗಳು ಹಾಕಿಕೊಟ್ಟಂತಹ ಮಾರ್ಗ ಸಾಮಾನ್ಯವಲ್ಲಾ ಆ ಮಾರ್ಗದತ್ತ ಸಾಗಿದರೆ ಮೋಕ್ಷವೆಂಬ ಮಾರ್ಗ ತಾನೇ ದೊರಕುತ್ತದೆ ಎಂದರು.
ಕಾರ್ಯಕ್ರಮದ ಮೊದಲಿಗೆ ದತ್ತಿ ದಾನಿಗಳಾದ ಶ್ರೀನಿವಾಸ ಸೋನಾರ ಎಂಬುವವರು ತಮ್ಮ ತಂದೆ ಲಿಂ.ಶAಕ್ರೇಪ್ಪ ಸೋನಾರ, ತಾಯಿ ಲಿಂ.ಶ್ರೀಮತಿ ಸುಮಿತ್ರಾಬಾಯಿ ಸೋನಾರ ಅವರ ಸ್ಮರಣೆಯನ್ನು ಏರ್ಪಡಿಸಿದ್ದರಲ್ಲದೇ ಇದು ಅಲ್ಲದೇ ಇದೇ ಸಮಯದಲ್ಲಿ ದತ್ತಿದಾನಿಗಳಾದ ಕಸಾಪ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಂತಾಯಿ ನೂಲಿಕರ ಅವರು ತಮ್ಮ ಪತಿದೇವರಾದ ಲಿಂ.ಸಕಾರಾಮ ನೂಲಿಕರ ಅವರ ಸ್ಮರಣೆಯನ್ನೂ ಸಹ ಉಪಸ್ಥಿತ ಅತಿಥಿ ಮಹೋದಯರೊಂದಿಗೆ ಹಾಗೂ ಕಸಾಪ ಪದಾಧಿಕಾರಿಗಳೊಂದಿಗೆ ಉಭಯಸ್ತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಗೈಯುವದರೊಂದಿಗೆ ಸ್ಮರಣೆ ಮಾಡಿದರು.
ಇದೇ ಸಮಯದಲ್ಲಿ ನಾಟ್ಯ ಮಯೂರಿ ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತೆ ಕುಮಾರಿ ಪೃಥ್ವಿ ಹೆಗಡೆ ಅವರ ತಂದೆಯಾದ ಮಂಜುನಾಥ ಹೆಗಡೆ ಅವರಿಗೆ ಹಾಗೂ ಸ್ನಾತಕೋತ್ತರ ಪಧವಿಯಲ್ಲಿ ಚಿನ್ನದ ಪಧಕ ಪಡೆದ ಕುಮಾರಿ ಸಾಕ್ಷೀ ಕತ್ತಿ ಅವರ ತಂದೆಯಾದ ಗುರುಸಂಗಪ್ಪ ಕತ್ತಿ ಅವರಿಗೆ ಕಸಾಪದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಪುರಸಭಾ ಸದಸ್ಯ ಪ್ರಭುಗೌಡ ಮದರಕಲ್ಲ ಅವರು ಉದ್ಘಾಟಿಸಿದರು. ವೇದಿಕೆಯ ಮೇಲೆ ಅಬ್ದುಲ್‌ಗನಿ ಮಕಾಂದಾರ ಉಪಸ್ಥಿತರಿದ್ದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಈ ಹಿಂದಿನಿAದ ನಡೆಸಿಕೊಂಡು ಬಂದAತಹ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮಗಳ ಬಗ್ಗೆ ಉಪಸ್ಥಿತ ಕಸಾಪ ಸದಸ್ಯರುಗಳ ಮುಂದೆ ವಿವರಿಸಿದರು.
ದತ್ತಿದಾನಿಗಳಾದ ಶ್ರೀನಿವಾಸ ಸೋನಾರ, ಉದಯಕುಮಾರ ಸೋನಾರ, ವೇಂಕಟೇಶ ಸೋನಾರ, ಸೌಮ್ಯಾ ಸೋನಾರ, ಸುಮತಾ ಸೋನಾರ, ಹಾಗೂ ಶ್ರೀಮತಿ ಶಾಂತಾಬಾಯಿ ನೂಲಿಕರ, ಶ್ರೀಮತಿ ಯಶೋದಾ ಶೇವಳಕರ, ಉಪಸ್ಥಿತರಿದ್ದರು.
ಈ ಸಮಯದಲ್ಲಿ ಪ್ರಭುಗೌಡ ಚೌದ್ರಿ, ಉಪನ್ಯಾಸಕಿ ಅಶ್ವಿನಿ ಜೋಗೂರ, ಸಿದ್ದಾರ್ಥ ಕಟ್ಟಿಮನಿ, ಅಶೋಕ ಹಂಚಲಿ, ನಿಂಗಣ್ಣ ಕುಂಟೋಜಿ, ಶ್ರೀಮತಿ ಉಮಾ ಘೀವಾರಿ, ಅಣ್ಣು ವಾಲಿ, ಎಂ.ಎಸ್.ಬಿರಾದಾರ, ಜಗದೀಶ ಬಿಳೇಭಾವಿ, ಡಾ.ನಜೀರ ಕೋಳ್ಯಾಳ, ಶಿಕ್ಷಕ ವಿಶ್ವನಾಥ ಪಾಟೀಲ, ಸಂಗನಗೌಡ ಅಸ್ಕಿ, ಮಹಾಂತೇಶ ಮುರಾಳ, ಎಂ.ಜಿ.ಕತ್ತಿ, ಆರ್.ವ್ಹಿ.ಜಾಲವಾದಿ, ಮೊದಲಾದವರು ಉಪಸ್ಥಿತರಿದ್ದರು.
ಎಸ್.ವ್ಹಿ.ಜಾಮಗೊಂಡಿ ಸ್ವಾಗತಿಸಿದರು. ಶಿಕ್ಷಕ ಆರ್.ಬಿ.ದಾನಿ ನಿರೂಪಿಸಿದರು. ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ವಂದಿಸಿದರು.