ಕಡಕೋಳ ಮಡಿವಾಳೇಶ್ವರ ಪುರಾಣ ಲೋಕಾರ್ಪಣೆ
ಯಡ್ರಾಮಿ:ಜು.30:ತತ್ವ ಪದಕಾರ ಶ್ರೀ ಕಡಕೋಳ ಮಡಿವಾಳೇಶ್ವರ ಮಾಹಾನ್ ಚರಿತ್ರೆ ಪುರಾಣ ಪುಸ್ತಕ ಲೋಕಾರ್ಪಣೆ ಮಾಡುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೊಳ ವ್ಯಕ್ತಪಡಿಸಿದ್ದರು.
ಕಡಕೋಳ ಮಡಿವಾಳೇಶ್ವರ ಮಹಾಮಠದ ಶ್ರೀ ವಿರೇಶ್ವರ ಶಿವಯೋಗಿಗಳ 35 ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಡಿವಾಳೇಶ್ವರ
ಪುರಾಣ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ.
ಕಡಕೋಳ ಮಡಿವಾಳಪ್ಪ ಸಾಮಾಜಿಕ ಕ್ರಾಂತಿಕಾರಿ ಹೋರಾಟಗಾರ ಸಾಮಾಜಿಕ ಅಸಮಾನತೆ ಜಾತಿ ವ್ಯವಸ್ಧೆ ವಿರುದ್ಧ ತತ್ವ ಪದಗಳ ಮೂಲಕ ಜನ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಸಂತ ಮಡಿವಾಳಪ್ಪ.
ಅಂತಹ ಮಡಿವಾಳಪ್ಪನವರ ಪುರಾಣ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯ ಪೂಜ್ಯ ಡಾ.ರುದ್ರಮುನಿ ಶಿವಾಚಾರ್ಯರು ಮಠಾಧ್ಯಕ್ಷರು ಕಡಕೋಳ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ನೆಲೋಗಿ,ನೇತೃತ್ವ ಪೂಜ್ಯ ಅಭಿನವ ಮುರಘೇಂದ್ರ ಶಿವಾಚಾರ್ಯರು ಹಿರೇಮಠ ಶಿರಶ್ಯಾಡ, ಸಮ್ಮಖ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ, ಪೂಜ್ಯ ಗುರುಬಸವ ಶಿವಾಚಾರ್ಯರು ಅಂಕಲಗಿ,ಪೂಜ್ಯ ಜೋತಿಷ್ಯ ರತ್ನ ರಾಮಲಿಂಗ ಹಿರೇಮಠ ಚಬನೂರು ಇತರರು ಉಪಸ್ಥಿತರಿದ್ದರು.