ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣ ಮಾಡಲೇಬೇಕೆಂದು ಟ್ವಿಟ್ಟರ್ ಅಭಿಯಾನ
ಕಲಬುರಗಿ:ಜು.30:ಶ್ರೀ ಪ್ರಶಾಂತ್ ಕಲ್ಲೂರ್ ನೇತ್ರತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆವತಿಯಿಂದ
ಕಲ್ಯಾಣ್ ಕರ್ನಾಟಕದ ಆರಾಧ್ಯ ದೈವ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಗಿರುವ ತೊಗರಿಕಣಿಜ ಕಲಬುರ್ಗಿಯ ಆರಾಧ್ಯ ದೈವ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಹೆಸರನ್ನು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು 03-08-2024 ರಂದು ಶನಿವಾರ ಟ್ವಿಟ್ಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಹೆಸರನ್ನು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಸುಮಾರು ವರ್ಷಗಳಿಂದ ವೀರಶೈವ ಲಿಂಗಾಯತ ಮಹಾ ವೇದಿಕೆ ಹೋರಾಟ ಮಾಡುತ್ತಾ ಮತ್ತು ಮನವಿ ಪತ್ರಗಳನ್ನು ಸಲ್ಲಿಸುತ್ತಿದು ಇನ್ನು ಮುಂದಾದರು ಇನ್ನು ನಾಮಕರಣವಾಗದೆ ಇರುವ ವಿಮಾನ ನಿಲ್ದಾಣದ ಹೆಸರನ್ನು ಶ್ರೀ ಶರಣಬಸವೇಶ್ವರ್ ವಿಮಾನ ನಿಲ್ದಾಣ ಎಂದೂ ನಾಮಕರಣ ಮಾಡಬೇಕು ಎಂದೂ ಇಂದು ಟ್ವಿಟ್ಟರ್ ಅಭಿಯಾನ ಮತ್ತು ಮುಂದಿನ ದಿನಗಳಲ್ಲಿ ಹೋರಾಟ ರೂಪುರೇಷೆಗಳನ್ನು ಮತ್ತು ಸರ್ವ ಸಮುದಾಯದ ಹಿರಿಯರ ಜೊತೆ ಸೇರಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದೂ ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ದಯಾನಂದ ಎಮ್ ಪಾಟೀಲ್ ಮತ್ತು ಯುವ ಮುಖಂಡರಾದ ಶ್ರೀ ಶ್ರೀಧರ್ ಎಮ್ ನಾಗನಹಳ್ಳಿ ಪತ್ರಿಕಾ ಮೂಲಕ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣರಾವ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವ್ಕಾರ, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಆನಂದ್ ಕಣಸೂರ್ ಮತ್ತು ಸಹ ಕಾರ್ಯದರ್ಶಿ ಪರಮೇಶ್ವರ್ ಯಲಮೇಲಿ, ಜಿಲ್ಲಾ ಸಂಚಾಲಕರಾದ ಸತೀಶ್ ಮಾಹುರ್, ಗುರುರಾಜ್ ಅಂಬಾಡಿ, ಸತೀಶ್ ಕೋಣಿನ್, ಕಿರಣ್ ಕಣ್ಣಿ, ಗುರುರಾಜ್ ಸುಂಟನೂರ್, ಮತ್ತು ಸದ್ಯಸರಾದ ಪ್ರಜ್ವಲ್, ಸಚಿನ್, ಶ್ರೀಕಾಂತ್ ಬಿರಾದರ, ಆಕಾಶ್ ಕುಲಕರ್ಣಿ ಉಪಸ್ಥಿತರಿದ್ದರು