ಸಮಾಜದ ಸಂಘಟನೆಗೆ ಶ್ರಮಿಸಿ :ಶರಣು ಮೋದಿ
ಜೇವರ್ಗಿ :ಜು.30: ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಅವಶ್ಯಕವಾಗಿದೆ ಹೀಗಾಗಿ ಪ್ರತಿಯೊಬ್ಬರೂ ಸಮಾಜಕ್ಕಾಗಿ ಶ್ರಮಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಹೇಳಿದರು,
ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಸೋಮವಾರ ಜರುಗಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಆವರು ನಾನು ಎನ್ನುವುದನ್ನು ಬಿಟ್ಟು ನಾವು ಎಂದಾಗ ಮಾತ್ರ ಸಂಘಟನೆ ಉಳಿಯಲು ಸಾಧ್ಯ, ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ನೂತನ ಪದಾಧಿಕಾರಿಗಳು ತಾಲೂಕಿನಾದ್ಯಾಂತ ಸಂಚರಿಸಿ ಸಂಘಟನೆ ಬಲಪಡಿಸಲು ಶ್ರಮಿಸಬೇಕೆಂದು ಕಳೆದ ಹಲವಾರು ವರ್ಷಗಳ ಬೇಡಿಕೆಯಾಗಿರುವ ಸಮಾಜದ ಬಾಲಕಿಯರ ವಸತಿ ನಿಲಯ ನಿಲಯ ನಿರ್ಮಾಣಕ್ಕೆ ಬದ್ಧರಾಗಿದ್ದು, ವಯಕ್ತಿಕವಾಗಿ ಐದು ಲಕ್ಷ ದೇಣಿಗೆ ನೀಡಲಾಗುವುದೆಂದು ಭರವಸೆ ನೀಡಿದರು, ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸಂಘಟನೆಯಿAದ ಸಮಾಜದಲ್ಲಿನ ದುರ್ಬಲರಿಗೆ ಬಲ ತುಂಬಲು ಸಾಧ್ಯವಾಗುತ್ತದೆ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ನಿವೇಶನ ಮಂಜೂರಾಗಿದ್ದು. ಶೀಘ್ರದಲ್ಲಿಯೇ ಅಡಿಗಲ್ಲು ನೆರವೇರಿಸಿ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು, ಮಹಾ ಸಭಾದ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಸೀರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಮಾಗಣಗೇರ, ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು ಸೊನ್ನ, ಶ್ರೀ ಕೆಂಚಬಸವ ಶಿವಾಚಾರ್ಯರು ಆಲೂರು, ಶ್ರೀ ರುದ್ರಮುನಿ ಶಿವಾಚಾರ್ಯರು ಕಡಕೋಳ, ಶ್ರೀ ಸಿದ್ದಲಿಂಗ ಸ್ವಾಮಿಗಳು ನೆಲೋಗಿ,
ಶ್ರೀ ಮಹಾಂತ ಸ್ವಾಮಿಗಳು ಜೇರಟಗಿ, ಶ್ರೀ ಸಿದ್ದಲಿಂಗ ಸ್ವಾಮಿಗಳು ಯಡ್ರಾಮಿ, ಶ್ರೀ ಅಭಿನವ ಸ್ವಾಮಿಗಳು ಅಂಕಲಗಿ,
ಶ್ರೀ ಸಿದ್ದ ಕಭಿರಾuಟಿಜeಜಿiಟಿeಜನಂದ ಸ್ವಾಮಿಗಳು, ಶ್ರೀ ಕೆಂಚಬಸವ ಸ್ವಾಮಿಗಳು ಕೋಳಕೂರ, ಶ್ರೀ ರುದ್ರಮುನಿ ಶಿವಾಚಾರ್ಯರು ಮಳ್ಳಿ, ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ವಿಜಯಕುಮಾರ ಹಿರೇಮಠ, ಗುರುಲಿಂಗಪ್ಪಗೌಡ ಪಾಟೀಲ್ ಅಂದೋಲ, ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷ ಸಿದ್ದು ಅಂಗಡಿ,ಶಿವಪುತ್ರ ಸಾಹೂ ಕೋರಿ, ಮಲ್ಲನಗೌಡ ನೇದಲಗಿ, ಶರಣಬಸವ ಕಲ್ಲಾ, ಸಿದ್ದಣ್ಣ ಹೂಗಾರ, ಬಾಪುಗೌಡ ಬಿರಾಳ, ಅಣ್ಣಾರಾವ್ ನಿಷ್ಟಿ ದೇಶಮುಖ್, ವಿಜಯಕುಮಾರ ಪಾಟೀಲ್ ಕಲ್ಲಹಂಗರಗಾ, ಬಸವರಾಜ್ ಸಾಸಬಾಳ ದಯಾನಂದ ದೇವರಮನಿ, ವಿಜಯಕುಮಾರ ಬಿರಾದಾರ ಸೊನ್ನ, ಚಂದ್ರಶೇಖರ ಹೊಸಮನಿ, ಚನ್ನು ಪಾಟೀಲ ನೇದಲಗಿ, ದುಳೇಶ್ ಪಾಟೀಲ್ ನೆಲೋಗಿ ಸಮರ್ಥ ದೇವರಮನಿ ಬಿ ಎಂ ಪಾಟೀಲ್ ಕಲ್ಲೂರ್ ರಾಚಣ್ಣ ಸಾಹು ಸರದಾರ್ ರಾಜು ಬಂಟನೂರು ಕಾಶಿನಾಥ್ ಗಾಣಿಗೇರ್
ಮಂದೇವಾಲ್ ಬಸವರಾಜ್ ಮಡಿವಾಳ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ನಾಯಕರು,ಯುವಕರು,ಮಹಿಳೆಯರು ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.
ಶಿವರುದ್ರಯ್ಯ ಗೌಡಗಾವ್ ಪ್ರಾರ್ಥಿಸಿದರು. ಕುಮಾರಿ ಸಮೃದ್ಧಿ ಗುಳೇದ ವಚನ ನೃತ್ಯ ಮಾಡಿದರು, ಗುರುಲಿಂಗಯ್ಯ ಸ್ವಾಮಿ ಯನಗುಂಟಿ ಸ್ವಾಗತಿಸಿದರು,ಶಿವಪುತ್ರ ನೆಲ್ಲಿಗಿ ನಿರೂಪಿಸಿದರು, ಮಲ್ಲಿಕಾರ್ಜುನ ಬಿರಾದಾರ ವಂದಿಸಿದರು