ಚಿನಮಳ್ಳಿ ; ಗ್ರಾಮಕ್ಕೆ ಬಸ್ಸಿನ ಸೌಕರ್ಯ ಕಲ್ಪಿಸಿದ ಶಾಸಕ ಎಂ.ವೈ.ಪಾಟೀಲ
ಅಫಜಲಪುರ ;ಜು.30: ಸುಮಾರು ದಿನಗಳಿಂದ ಕಲಬುರಗಿ ವಾಯಾ ಚಿನಮಳ್ಳಿ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್ ಸೌಕರ್ಯ ಕಾರಣಾಂತರದಿAದ ಸ್ಥಗಿತಗೊಂಡಿತು. ಚಿನಮಳ್ಳಿ, ಸಂಗಾಪೂರ, ಹಸರಗುಂಡಗಿ ಹಾಗೂ ಹೂವಿನಹಳ್ಳಿ ಗ್ರಾಮಸ್ಥರು ಸೇರಿ ಶಾಸಕ ಎಂ.ವೈ. ಪಾಟೀಲ ಅವರಿಗೆ ಬಸ್ಸ್ ಬಾರದೆ ಇರುವುದರಿಂದ ನಾಲ್ಕೈದು ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಮೊದಲಿನ ಹಾಗೆ ಕಲಬುರಗಿಯಿಂದ ಚಿನಮಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಪ್ರಾರಂಭಿಸಬೇಕೆAದು ಮನವಿ ಮಾಡಿದ್ದರು.
ಆ ಭಾಗದ ಮುಖಂಡರುಗಳ ಮನವಿಗೆ ಸ್ಪಂದಿಸಿ ನೂತನವಾಗಿ ಕಲಬುರಗಿ ಚಿನಮಳ್ಳಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಜನರ ಸಮಸ್ಯೆ ಪರಿಹಾರ ಮಾಡಿದ ಶಾಸಕ ಎಂ. ವೈ.ಪಾಟೀಲ ಅವರಿಗೆ ಆ ಭಾಗದ ಗ್ರಾಮದ ಜನರಿಂದ ಕೃತಜ್ಞತೆ ಸಲ್ಲಿಸಿದರು.
ಕಲಬುರಗಿ ಚಿನಮಳ್ಳಿ ಗ್ರಾಮಕ್ಕೆ ನೂತನವಾಗಿ ಆರಂಭವಾದ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಅವರಿಗೆ ಹಸರಗುಂಡಗಿ, ಚಿನಮಳ್ಳಿ ಹಾಗೂ ಸಂಗಾಪೂರ ಗ್ರಾಮದ ಮುಖಂಡರಿAದ ಶಾಲು ಹೊದಿಸಿ ಸನ್ಮಾನಿಸಿದರು.