ಸೌಲಭ್ಯ ನೀಡುವುದು ಅಧಿಕಾರಿಗಳ ಜವಾಬ್ದಾರಿ
ಗುಳೇದಗುಡ್ಡ,ಜು೩೦: ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ನೀಡುವುದು ಸರಕಾರ ಜವಾಬ್ದಾರಿಯಾಗಿದೆ. ವಸತಿ ನಿಲಯಗಳಿಗೆ ಗಾಳಿಬೆಳಕು ಹೊಂದಿರುವ ಉತ್ತಮ ಕಟ್ಟಡ, ಕುಡಿಯವ ನೀರು, ಶೌಚಾಲಯ, ಉತ್ತಮ ಆಹಾರ ಸೇರಿದಂತೆ ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು. ವಸತಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸದೇ ಇದ್ದಲ್ಲಿ ಅದಕ್ಕೆ ಸಂಬAಧಿಸಿದ ಅಧಿಕಾರಿಗಳೇ ಜವಾಬ್ದಾರಿಯಾಗುತ್ತಾರೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾನವಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಹೇಳಿದರು.
ಅವರು ಪಟ್ಟಣದ ಚೌಬಜಾರನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮ್ಯಾಟ್ರಿಕ್ ನಂತರದ ಬಾಲಕೀಯರ ವಸತಿನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲನೆ ಮಾಡಿ, ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ, ಇಲ್ಲಿನ ವಸತಿ ನಿಲಯ ಚಿಕ್ಕದಿದ್ದು, ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಆಸ್ಪತ್ರೆಗೆ ಭೇಟಿ: ಭ್ರೂಣಲಿಂಗ ಪತ್ತೆ ಪ್ರಕರಣಕ್ಕೆ ಸಂಬAದಿಸಿದAತೆ ಇತ್ತೀಚೆಗೆ ಪಟ್ಟಣದ ಬನಶಂಕರಿ ಖಾಸಗಿ ಆಸ್ಪತ್ರೆಯ ಮೇಲೆ ದೆಹಲಿಯ ಎನ್‌ಐಎಂಸಿ ತಂಡ ದಾಳಿ ಮಾಡಿ, ಆಸ್ಪತ್ರೆಯ ಮೇಲೆ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಮಾನವಹಕ್ಕು ಆಯೋಗ ಸದಸ್ಯರು ಭೇಟಿ ನೀಡಿದರು. ಆಸ್ಪತ್ರೆಯ ಸ್ಕಾö್ಯನಿಂಗ್ ಸೀಜ್ ಮಾಡಲಾಗಿದ್ದ ಬಗ್ಗೆ ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡಿದ್ದೇವೆ. ಪ್ರಕರಣ ದಾಖಲಾಗಿದ್ದು, ಕೋರ್ಟ್ನಲ್ಲಿ ತನಿಖೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಮಂಗಳಾ ಎಂ, ಡಿಎಚ್‌ಓ ಜಯಶ್ರೀ ಎಮ್ಮಿ, ಕಂದಾಯ ನಿರೀಕ್ಷ ಶಿವರಾಯಪ್ಪ ಜೋಗಿನ, ಗ್ರಾಮಲೆಕ್ಕಾಧಿಕಾರಿ ಪಿ.ಪಿ. ತಳವಾರ, ವಸತಿನಿಲಯದ ಮೇಲ್ವಿಚಾರಕಿ ರೇಷ್ಮಾ ಕಾತರಕಿ ಇದ್ದರು.