ಡಿ.ಕೆ ಗಣಪತಿ ಅವಧಿಯ ಕಾರ್ಯವೈಖರಿ ತೃಪ್ತಿಕರ: ಶಿವಾನಂದ ತಗಡೂರು
ಬೀದರ್:ಜು.30: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಗಣಪತಿ ಅವರು ಕಳೆದ ಒಂದು ವರ್ಷದಲ್ಲಿ ಜಿಲ್ಲಾಧ್ಯಕ್ಷರಾಗಿ ಮಾಡಿದ ಕಾರ್ಯ ರಾಜ್ಯ ಸಂಘಕ್ಕೆ ತೃಪ್ತಿ ತಂದಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದ ಅಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಬೀದರ್ ಜಿಲ್ಲಾ ಸಂಘ ಇಷ್ಟು ವರ್ಷ ಹುಟ್ಟಿ ಒಂದು ಅಕೌಂಟ್ ತೆಗೆಯಲು ಸಾಧ್ಯವಾಗಲಿಲ್ಲ. ಆದರೆ ಡಿ.ಕೆ ಗಣಪತಿ ಹಾಗೂ ಶಿವಕುಮಾರ ಸ್ವಾಮಿ ಜೊತೆಗೂಡಿ ಖಾತೆ ತೆಗೆದು ಅದರ ಮುಖೇನ ವ್ಯವಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಹಿAದೆ 2006ರಲ್ಲಿ ಹಾಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಬಸವರಾಜ ಕಾಮಶೆಟ್ಟಿ ಅವರು ರಾಜ್ಯ ಸಮ್ಮೇಳನ ಮಾಡಿ ಜಿಲ್ಲಾ ಸಂಘದ ಘನತೆ ಹೆಚ್ಚಿಸಿದರು. ಆದರೆ ಅಶೋಕಕುಮಾರ ಕರಂಜಿ ಅವರು ಸಂಘ ನಿಭಾಯಿಸುವಲ್ಲಿ ಸ್ವಲ್ಪ ಎಡವಿದರೂ ಸಂಘದಲ್ಲಿಯೇ ಉಳಿದುಕೊಳ್ಳುವ ಮನಸ್ಸು ಮಾಡಿರುವುದು ಸಂತಸದ ಸಂಗತಿ ಎಂದರು.