ಭೀಮಾ ಆಣೆಕಟ್ಟಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ
ಅಫಜಲಪುರ:ಜು.30: ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮ ಮುಕ್ತಾಯದ ನಂತರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಭೀಮಾ ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಚಿಸಿದರು.
ಪ್ರಸ್ತುತ ಮಳೆಗಾಲ ಸಂದರ್ಭ ಇರುವುದರಿಂದ ಹೊರಹರಿವು ಮತ್ತು ಒಳಹರಿವಿನ ನೀರನ್ನು ಸಮನಾಗಿ ಕಾಯ್ದಿಟ್ಟುಕೊಳ್ಳಬೇಕು. ಅಲ್ಲದೆ ನದಿ ಪಾತ್ರದ ಗ್ರಾಮೀಣ ಭಾಗದ ಜನ ಜಾನುವಾರುಗಳು ನದಿ ತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಸಂಜೀವಕುಮಾರ ದಾಸರ್, ಗ್ರೇಡ್-2 ತಹಸೀಲ್ದಾರ ಶರಣಬಸಪ್ಪ ಹೊಸಮನಿ, ಕೆಎನ್ ಎನ್ ಎಲ್ ಇಇ ಸಂತೋಷಕುಮಾರ ಸಜ್ಜನ್, ಎಇಇ ಸಂತೋಷ ಪಾಟೀಲ್, ಎಇ ಗುರುಲಿಂಗಪ್ಪ ಪಾಣೇಗಾಂವ, ರಾಹುಲ್ ಸಿಂಪಿ, ನಾಗೇಶ ಬಿಲ್ಲಾಡ ಹಾಜರಿದ್ದರು.