ಸರ್ಕಾರದ ಇಚ್ಛಾ ಶಕ್ತಿ ಕೊರತೆ ವ್ಯರ್ಥವಾಗಿ ಹರಿದು ಹೋಗುತ್ತಿರುವ ನದಿಯ ನೀರು..
ಉಮಾಪತಿ ಶೆಟ್ಟರ್          
ಹಗರಿಬೊಮ್ಮನಹಳ್ಳಿ. ಜು.30 ರಾಜ್ಯದ ಮಲೆನಾಡು ಭಾಗದಲ್ಲಿ ಸಮೃದ್ಧ ಮಳೆಯಿಂದ ತುಂಗಾ ಮತ್ತು ಭದ್ರಾ  ಜಲಾಶಯಗಳು ಭರ್ತಿಯಾಗಿ ಎರಡು ನದಿಗಳು ಸಂಗಮವಾಗಿ  ಸಾಕಷ್ಟುನೀರು ಹರಿದು ಬರುತ್ತಿದ್ದರು ಅದನ್ನು ತಡೆಗಟ್ಟಿ  ಸಂಗ್ರಹಿಸುವ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ರಾಜಕೀಯ ಜನ ಪ್ರತಿನಿಧಿಗಳು ವಿಫಲರಾಗಿರುವುದು ನೋಡಿದರೆ ಬೇಸರವಾಗುತ್ತದೆ .
 ಮೂಲಸೌಕರ್ಯಗಳಲ್ಲಿ  ನೀರು ಒಂದು ಮಹತ್ವವಾಗಿದ್ದು. ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ.  ನಮ್ಮ ಪಕ್ಕದಲ್ಲಿ ನದಿ ನೀರು ಹರಿದು ಹೋಗುತ್ತಿದ್ದರು. ಆ ನೀರನ್ನು ಪಶ್ಚಿಮ ತಾಲೂಕುಗಳಿಗೆ ನೀರನ್ನು ಹರಿಸಿ ಕೆರೆ ಕುಂಟೆಗಳನ್ನು ತುಂಬಿಸಿದರೆ  ಅಂತರ್ಜಲ ಹೆಚ್ಚಾಗಿ ಸುತ್ತಮುತ್ತ ರೈತರ ಪಂಪ್ ಸೆಟ್ ಗಳು ಸೇರಿದಂತೆ ಜನರಿಗೆ ಮತ್ತು ಜಾನುವಾರುಗಳಿಗೆ  ನಿರಂತರ ಕುಡಿಯುವ ನೀರಿನ ಸೌಲಭ್ಯ ಸಿಗಬಹುದಿತ್ತು.
ಬಹು ವರ್ಷಗಳ ಕನಸಾಗಿರುವ ಭದ್ರಾ ಬಲದಂಡೆ ಯೋಜನೆ ಜಾರಿಯಾದರೆ ಚಿತ್ರದುರ್ಗ ಜಿಲ್ಲೆ ಯ ಮೊಳಕಾಲ್ಮೂರು, ಜಗಳೂರು, ಭರಮಸಾಗರ ಸೇರಿದಂತೆ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ  ಕೊಟ್ಟೂರು ಹಗರಿಬೊಮ್ಮನಹಳ್ಳಿ ಹಡಗಲಿ ಹರಪನಹಳ್ಳಿ ತಾಲೂಕುಗಳ ಕೆರೆ, ಡ್ಯಾಮ್, ಚೆಕ್ ಡ್ಯಾಮ್, ಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಮಾಲವಿ ಜಲಾಶಯ  ತುಂಬಿಸಿಕೊಳ್ಳಬಹುದು.
. 1959ರಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಮತ್ತು ಬಾಚಿಗೊಂಡನಹಳ್ಳಿಯ ಗಾಂಧಿವಾದಿ ದಿ. ಚನ್ನಬಸನಗೌಡರ  ಕನಸು ಇದಾಗಿತ್ತು. ಯೋಜನೆಗೆ ಸಂಬಂಧಿಸಿದ ರೂಪರೇಷೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು. ಕೇಂದ್ರ ಸರ್ಕಾರ ಕೂಡ ಮುಂಜೂರು ಮಾಡಿತ್ತು. ಈ ಯೋಜನೆಯನ್ನು ಕಾರ್ಯಗತ ವಾಗದಂತೆ ಸ್ವಾರ್ಥ ರಾಜಕಾರಣಿಗಳು ವ್ಯವಸ್ಥಿತ ಸಂಚುರೂಪಿಸಿ ತುಳಿದು ಹಾಕಿ ಬಿಟ್ಟಿತು. ರೈತರ ನೆಮ್ಮದಿಯ ಜೀವನಕ್ಕೆ ಕೊಳ್ಳಿ ಇಟ್ಟರು. ಅಂದಿನಿಂದಲೂ ಭದ್ರಾ ಬಲದಂಡೆ ಯೋಜನೆ ನೆನೆಗುದಿಗೆ ಬಿದ್ದಿದೆ. ಸರ್ಕಾರ ಗ್ಯಾರೆಂಟಿ ಹೆಸರಿನಲ್ಲಿ  ಸಾವಿರಾರು ಕೋಟಿ ಖರ್ಚು ಮಾಡಿ ಹಣವನ್ನು ನೀರಿನಲ್ಲಿ ಹೋಮ ಮಾಡುತ್ತಿದೆ . ಆದರೆ ಅದೇ ನೀರಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡದೆ . ರೈತರ ಬದುಕು ಹಸನಗೊಳಿಸದೆ  ಮೀನಾ ಮೇಷ ಮಾಡುತ್ತಿರುವುದು ಯಾವ ನ್ಯಾಯ?.  ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ಈ ಭಾಗದ ಶಾಸಕರು ಮತ್ತು ಸಂಸದರು ಇಚ್ಚಾಶಕ್ತಿ  ಕೊರತೆ ಎಂದು ಕಾಣುತ್ತದೆ. ಹಲವಾರು ವರ್ಷಗಳಿಂದ ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದೆ. ಸರ್ಕಾರ ಅದನ್ನು ತೆಗೆಯುವಂತಹ ಕೆಲಸ ಮಾಡುತ್ತಿಲ್ಲ ಯಾಕೆ ಎಂದು ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಿದ್ದಾರೆ. ಏನೇ ಆಗಲಿ ಸರ್ಕಾರ ನೀರಾವರಿ ಗೆ ಸಂಬಂಧಿಸಿದಂತೆ ಹಣವನ್ನು ಖರ್ಚು ಮಾಡಿದರೆ ಯಾವತ್ತು ವ್ಯರ್ಥವಾಗುವುದಿಲ್ಲ.
 ಪಕ್ಕದಲ್ಲಿ ನದಿ ತುಂಬಿ ಭೋರ್ಗರಿಯದಿದ್ದರೂ . ಪಶ್ಚಿಮ ತಾಲೂಕುಗಳ  ಕೆರೆಗಳು , ಡ್ಯಾಮ್, ಚೆಕ್ ಡ್ಯಾಮ್  ನೀರಿಲ್ಲದೆ ಬಣಗುಡುತ್ತಿವೆ. ಈ ಕೆರೆಗಳು ಕೂಡ ಶಾಶ್ವತ ನೀರಿನಿಂದ ತುಂಬಿದರೆ  ನೋಡಲು ಎಷ್ಟು ಚಂದ ಅಲ್ಲವೇ?