ಬಳ್ಳಾರಿಗೆ ಬಾರದ ಉಸ್ತುವಾರಿ ಸಚಿವರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ,  ವಸತಿ ಸಚಿವ ಜಮೀರ್ ಅಹಮ್ಮದ್ ನೇಮಕಗೊಂಡು ತಿಂಗಳು ಕಳೆದರೂ ಇತ್ತ ತಿರುಗಿ ನೋಡಿಲ್ಲ.
ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಹಗರಣದ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಕಳೆದ ತಿಂಗಳು ವಿಜಯಮಗರ ಜಿಲ್ಲೆಗೂ ಉಸ್ತುವಾರಿಯಾಗಿರುವ   ಜಮೀರ್ ಅಹಮ್ಮದ್ ಖಾನ್  ಅವರನ್ನು ನಾಗೇಂದ್ರ ಅವರ ಅಭೀಪ್ಸೆಯಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು     ಜಿಲ್ಲೆಯ ನೂತನ‌ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರು.
 ಜಮೀರ್ ಅಹಮ್ಮದ್ ಜು.12 ಕ್ಕೆ ಆಗಮಿಸಿ  ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ನಿಗಧಿಯಾಗಿದ್ದು ಮುಂದೂಡಲಾಯ್ತು.
ಇಗ ಅವರು ನಿನ್ನೆ ಸಭೆಯೊಂದರಲ್ಲಿ ನಾನು ಎಷ್ಟು ದಿನ ಸಚಿವನಾಗಿ ಇರುತ್ತೇನೋ ಗೊತ್ತಿಲ್ಲ ಎಂದಿದ್ದಾರೆ. ನೇಮಕಗೊಂಡ ಮೇಲೆ ಬಳ್ಳಾರಿಗೆ ಬರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಜಿಲ್ಲೆಯ ಜನರಲ್ಲಿ ಉದ್ಭವವಾಗಿದೆ.