ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ
ಹುಬ್ಬಳ್ಳಿ,ಜು.೩೦: ತಹಶೀಲ್ದಾರರ ಸಭಾಭವನದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಾರುತಿ ಹಡಪದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ತಹಶೀಲ್ದಾರಾದ ಜಿ.ವಿ. ಪಾಟೀಲ್, ಅಧಿಕಾರಿಗಳಾದ ರಘು ಬೊಮ್ಮನಹಳ್ಳಿ ಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ದೇವರಾಜ್ ದಾಡಿಬಾವಿ, ಜಿಲ್ಲಾ ಅಧ್ಯಕ್ಷರಾದ ಈರಣ್ಣ ಚಿಕ್ಬಳ್ಳಿಕಟ್ಟಿ, ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ನಿಂಗರಾಜ್ ಹಡಪದ, ತಾಲೂಕ ಅಧ್ಯಕ್ಷರಾದ ಸಂಗಮೇಶ್ ಬೂದಿಹಾಳ, ಗುರುನಾಥ್ ಹಡಪದ, ಎಫ್.ಎಸ್. ತಂಬುದಮಣಿ, ಶಿವಾನಂದ ಹಡಪದ, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಫಕೀರೇಶ ಹಡಪದ, ಪ್ರಸನ್ನ ಕುರ್ತುಕೋಟಿ, ಸಮಾಜ ಬಾಂಧವರು ಉಪಸ್ಥಿತರಿದ್ದರು. ನಂತರ ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ೮೫% ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಸಂಘದಿAದ ಸನ್ಮಾನ ನೆರವೇರಿಸಲಾಯಿತು.