ಹದಗೆಟ್ಟ ರಸ್ತೆ: ಪ್ರತಿಭಟನೆ
ಲಕ್ಷೆ÷್ಮÃಶ್ವರ,ಜು೩೦: ದೊಡ್ಡೂರು ರಸ್ತೆಯಿಂದ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಜಂಗಳಿಕೇರಿ ರಸ್ತೆ ಮುನಿಯನ ತಾಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು ರೈತರು ಜಮೀನುಗಳಿಗೆ ತಲುಪಲು ಹರಸಾಹಸ ಪಡಬೇಕಾಗಿದೆ ಇದರಿಂದಾಗಿ ರೊಚ್ಚಿಗೆದ್ದ ರೈತರು ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಬಸಣ್ಣ ಬೆಂಡಿಗೇರಿಯವರು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಯಾವ ರಸ್ತೆಗಳು ಸುಸ್ಥಿತಿಯಲ್ಲಿಲ್ಲ ರೈತರು ಹರಸಹಾಸ ಮಾಡಿ ಎದ್ದು ಬಿದ್ದು ತಮ್ಮ ಜಮೀನುಗಳಿಗೆ ತಲುಪಲು ಇನ್ನಿಲ್ಲದ ಸರ್ಕಸ್ ಮಾಡಬೇಕಾಗಿದೆ ಇದುವರೆಗೂ ಯಾರೊಬ್ಬರೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಾಯ ಕಲ್ಪ ನೀಡದಿರುವುದರಿಂದ ರಸ್ತೆಗಳೆಲ್ಲ ಅಯೋಮಯವಾಗಿವೆ ಸಂಬAಧಪಟ್ಟ ಅಧಿಕಾರಿಗಳು ರೈತ ಸಂಪರ್ಕ ರಸ್ತೆಗಳನ್ನು ಗುಣಪಡಿಸದಿದ್ದರೆ ರೈತರು ರೊಚ್ಚಿಗೇಳುವ ಕಾಲ ದೂರವಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷಟಾಕಪ ಸಾತಪೂತೆ ರಾಮಣ್ಣ ಗೌರಿ ರಿಯಾಜ್ ಗದಗ್ ಫಕೀರಪ್ಪ ಹಾವನೂರ ಹೊಳಲಪ್ಪ ಹಾವನೂರ ಹುಸೇನ್ ಸಾಬ್ ಸಿದ್ದಿ ಸರಪರಾಜ್ ಬಂಕಾಪುರ ಬಸವರಾಜ ಉಮಚಗಿ ಈಶ್ವರಪ್ಪ ಉಮಚ್ಚಿಗಿ ಸಲೀಂ ಸಾಬ್ ಸೂರಣಿಗಿ ಬಸವರಾಜ್ ಉಮಚಗಿ ಸೇರಿದಂತೆ ಅನೇಕ ರೈತರಿದ್ದರು.